Posts Slider

Karnataka Voice

Latest Kannada News

ಶಿಕ್ಷಣ ಕ್ಷೇತ್ರ ಬಹಳ ವಿಶಾಲವಾಗಿದ್ದು: ಡಾ.ಡಿ.ಜಿ.ಶೆಟ್ಟಿ

1 min read
Spread the love

ಧಾರವಾಡ: ಶಿಕ್ಷಣ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರ.  ಅದರಲ್ಲಿ ಸಾಧನೆಯನ್ನು ಗುರುತಿಸಿ ಗೌರವ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.  ನನಗೆ ಸಿಕ್ಕ ಗೌರವ ನನ್ನ ತಂದೆ-ತಾಯಿ, ಕಾಲೇಜಿನ ಸರ್ವ ಸಿಬ್ಬಂದಿ ಮತ್ತು ಆಡಳಿತ ಮಂಡಳಿ, ಉಪನ್ಯಾಸ ವರ್ಗ ಮತ್ತು ಎಲ್ಲ ಹಿತೈಷಿಗಳಿಗೆ ಹಾಗೂ ಸ್ನೇಹಿತ ಬಳಗಕ್ಕೆ ಸಲ್ಲುತ್ತದೆ ಎಂದು ಡಾ.ಡಿ.ಜಿ ಶೆಟ್ಟಿ ಶೈಕ್ಷಣಿಕ ಸೊಸೈಟಿಯ ಅಧ್ಯಕ್ಷ ಡಾ.ಡಿ.ಜಿ ಶೆಟ್ಟಿ ಹೇಳಿದರು.

ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಪ್ರಯುಕ್ತ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಮತ್ತು ಕಸಾಪ ವತಿಯಿಂದ ಕಸಾಪದ ಸಭಾಭವನದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಭಾರತೀಯ ಸೆಕ್ರೆಟರಿ ಕಂಪನಿಯವರು ನೀಡುವ ಅಸಾಧಾರಣ ಕಾರ್ಯಕ್ಷಮತೆ ಪ್ರಶಸ್ತಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಹಿರಿಯ ಉದ್ಘೋಷಕ, ರಂಗಕರ್ಮಿ ಡಾ.ಶಶಿಧರ ನರೇಂದ್ರ ಮಾತನಾಡಿ, ನಾವು ಮಾಡುವ ಕಾರ್ಯ ಅತ್ಯಂತ ಮನಸ್ಸು, ಪ್ರೀತಿಯಿಂದ ಮಾಡಿದ್ದೇ ಆದರೇ ಖಂಡಿತಾ ಯಶಸ್ಸು ಸಿಗುತ್ತದೆ. ಕಾನೂನಾತ್ಮಕ ವ್ಯವಹಾರದ ತಿಳುವಳಿಕೆ ನೀಡುವುದು ಬಹಳ ಕಷ್ಟದ ಕಾರ್ಯ. ಅಂತಹ ಕಾರ್ಯವನ್ನು ಡಾ.ಡಿ.ಜಿ.ಶೆಟ್ಟಿ ಮಾಡಿದ್ದಾರೆಂದು ಹೇಳಿದರು. ಕಸಾಪದ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಮಾಡಿದ ಕಾರ್ಯ  ಯಶಸ್ವಿಯಾಗಿ ನಡೆದು ಕೊನೆಯಲ್ಲಿ ಸಿಗುವ ಆನಂದ ಮತ್ತೇಲಿಯೂ ಸಿಗಲ್ಲ  ಹಾಗೂ ಈ ಕಾರ್ಯಕ್ಕೆ ಮಹಿಳೆಯ ಪಾತ್ರ ದೊಡ್ಡದಿದೆ ಎಂದರು.

ಎಸಿಎಚ್ಆರ್ ರಾಜ್ಯ ಕಾರ್ಯಾಧ್ಯಕ್ಷ  ಬಸವರಾಜ ಆನೆಗುಂದಿ ಮಾತನಾಡಿ,  ಡಾ.ಡಿ.ಜಿ.ಶೆಟ್ಟಿ ಅವರ ಒಡನಾಟದ ಅನುಭವಗಳನ್ನು ಹಂಚಿಕೊಂಡು,  ಅವರ ಸಹಾಯದ ಗುಣವನ್ನು ವಿವರಿಸಿದರು.

ಸಾಹಿತಿ,  ಸಂಘಟಕ ಮಾರ್ತಾಂಡಪ್ಪ ಎಂ ಕತ್ತಿ, ಜೀವನದಲ್ಲಿ ನೋವು ಕೊಟ್ಟವರೇ ಬದುಕಿನ ಹಿತೈಷಿಗಳು… ನಂಬಿಸಿ ಮೋಸ ಮಾಡಿದವರೇ ಬದುಕಿಗೆ ಗುರುಗಳ ಸಮಾನರು.. ಪ್ರೀತಿ ಕೊಟ್ಟವರು ಬದುಕಿನ ದೇವರು. ನಮ್ಮನ್ನು ತಿರಸ್ಕರಿಸಿದವರೇ ನಮ್ಮ ಬಂಧುಗಳು… ಕಾಲು ಎಳೆದವರೇ ಶಕ್ತಿದಾತರು… ದೂರ ತಳ್ಳಿದವರೇ ನಮಗೆ ಬಂಧುಗಳಾಗಿತ್ತಾರೆ ಹಾಗೂ ಪ್ರತಿಯೊಂದು ಕಾರ್ಯಕ್ಕೂ ಅವರೇ ನಮಗೆ ಪ್ರೋತ್ಸಾಹಕರಾಗುತ್ತಾರೆ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ  ಕೆ.ಎಚ್.ನಾಯಕ ವಹಿಸಿ ಮಾತನಾಡಿದರು. ಎಸಿ ಎಚ್ಆರ್ ಜಿಲ್ಲಾ ಅಧ್ಯಕ್ಷ ಸತೀಶ ಸರ್ಜಾಪೂರ, ಕಿಶೋರ ಕಟ್ಟಿ, ಎಸ್.ಎನ್ ಭಟ್  ಉಪಸ್ಥಿತರಿದ್ದರು.

ಆರತಿ ಕುಲಕರ್ಣಿ ನಿರೂಪಿಸಿದರು. ಸುರೇಶ ಬೆಟಗೇರಿ ಸ್ವಾಗತಿಸಿದರು. ಪ್ರೊ.ಎಂ.ಎಸ್. ಸಾಲಿಮಠ  ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರು ಹಿರೇಮಠ ವಂದಿಸಿದರು.

ಮಹೇಶ ಪಾಟೀಲ, ಪವನ ಜೋಶಿ,  ಆರ್ ಲಕ್ಷ್ಮಣ,  ಮಂಜುನಾಥ ಚವ್ಜಾಣ, ಮಂಜುರಾಮ ಶೆಟ್ಟಿ, ಕಸಾಪ ತಾಲೂಕಾ ಅಧ್ಯಕ್ಷ ಎಫ್. ಬಿ.ಕಣವಿ, ಬಸವರಾಜ ಕೌಜಲಗಿ, ಮಾರುತಿ ನಾಯಕ,  ರಾಘವೇಂದ್ರ ಹರಪನಹಳ್ಳಿ,  ಮಲ್ಲಿಕಾರ್ಜುನ ಮಠಪತಿ, ಅಶೋಕ ಶೆಟ್ಟರ, ಗಂಗಮ್ಮ ಯಲಿಗಾರ, ರಶ್ಮಿ ಶೆಟ್ಟಿ, ಎನ್ ಜಿ ಪಾಟೀಲ, ಗೌರಿ ಪಾಟೀಲ, ಪೂರ್ಣಿಮಾ ಶೆಟ್ಟಿ, ಶಿವುಕುಮಾರ ನಿರ್ಲಕಟ್ಟಿ, ಡಾ.ಡಿ.ಜಿ.ಶೆಟ್ಟಿ ಶೈಕ್ಷಣಿಕ ಸೊಸೈಟಿಯ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *