Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ 4ಡೆಂಗ್ಯೂ ಪ್ರಕರಣ ದೃಢ- 4ವರ್ಷದ ಮಗು ಸಾವು…!!!

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಒಟ್ಟು 46 ಜ್ವರ ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ 4 ಪ್ರಕರಣಗಳು ಡೆಂಗ್ಯೂ ಎಂದು ಖಚಿತಪಟ್ಟಿವೆ. ಆ ಗ್ರಾಮದ 4 ವರ್ಷದ ಮಗು ದಿನಾಂಕ: 10-06-2024 ರಂದು SDM ಆಸ್ಪತ್ರೆಗೆ ದಾಖಲಾಗಿದ್ದು ದಿ: 11-06-2024 ರಂದು ನಿಧನ ಹೊಂದಿದೆ. ಸದರಿ ಮಗುವಿನ ರಕ್ತದ NS1 ಕಿಟ್ ಮೂಲಕ ಪರೀಕ್ಷಿಸಲಾಗಿ ಅದು ಡೆಂಗ್ಯೂ ಎಂದು SDM ನಲ್ಲಿ ಖಚಿತಪಟ್ಟಿದೆ.

ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಮಲೇರಿಯಾ ಅಧಿಕಾರಿಗಳು, ತಾಲೂಕಾ ಆರೋಗ್ಯಧಿಕಾರಿಗಳು, ಜಿಲ್ಲಾ ಕೀಟಶಾಸ್ತ್ರಜ್ಞರು ಹಾಗೂ ಸಿಬ್ಬಂದಿಯವರು ಸದರಿ ಗ್ರಾಮದಲ್ಲಿ ತಾಲೂಕಿನ ಒಟ್ಟು 46 ಸಿಬ್ಬಂದಿಯಿಂದ ನಡೆದ ಲಾರ್ವಾ ನಿರ್ಮೂಲನಾ ಕಾರ್ಯದ ಸಮೀಕ್ಷೆಯನ್ನು ಮೇಲ್ವಿಚಾರಣೆ ಮಾಡಲು ಮುಮ್ಮಿಗಟ್ಟಿ ಗ್ರಾಮಕ್ಕೆ ಭೆಟ್ಟಿ ನೀಡಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿಯಂತ್ರಣ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿದರು. ತಕ್ಷಣದಿಂದ ಶುಷ್ಕ ದಿನ ಅನುಸರಿಸಲು, ಘನ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮನೆ ಮನೆಗೆ ಭೇಟಿ ನೀಡಿ ತಕ್ಷಣ ಕಂಡು ಬಂದ ಘನ ತ್ಯಾಜ್ಯ ಗಳನ್ನು ಗ್ರಾಮ ಪಂಚಾಯತ ಕಸದ ವಾಹನದಲ್ಲಿ ಸಾಗಿಸಲಾಯಿತು ಹಾಗೂ ಜನರಲ್ಲಿ ನೀರನ್ನು ಧೀರ್ಘ ಅವಧಿ ಸಂಗ್ರಹಿಸದಂತೆ ತಿಳುವಳಿಕೆ ನೀಡಲಾಯಿತು. ಮುಮ್ಮಿಗಟ್ಟಿ ಗ್ರಾಮದಲ್ಲಿ ಜ್ವರ ಪ್ರಕರಣಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ತಾತ್ಕಾಲಿಕವಾಗಿ ಸ್ಥಳೀಯ ” ಜ್ವರ ಚಿಕಿತ್ಸಾಲಯವನ್ನು ” ಸ್ಥಾಪಿಸಲಾಗಿದೆ.


ಇಲಾಖೆ ವತಿಯಿಂದ 16-04-2024 ರಿಂದ ಇಂದಿನ ವರೆಗೆ ಒಟ್ಟು 3057 ಮನೆಗಳಲ್ಲಿ ಲಾರ್ವಾ ನಿರ್ಮೂಲನ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 157 ಮನೆಗಳಲ್ಲಿ ಲಾರ್ವಾ ಕಂಡು ಬಂದಿದ್ದು ಅವುಗಳನ್ನು ನಾಶ ಪಡಿಸಲಾಗಿದೆ. ಸದ್ಯ 6 ಜ್ವರದ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಡೆಂಗ್ಯೂ ಪ್ರಕರಣ ಹೆಚ್ಚಾಗದಂತೆ ತಡೆಯಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೆಳಗಿನ ಸಲಹೆಗಳನ್ನು ಸಮುದಾಯ ಪಾಲಿಸುವಂತೆ ಮನವಿ ಮಾಡಿದ್ದಾರೆ.

*ಜನರು ದೀರ್ಘ ಅವಧಿ ನೀರು ಸಂಗ್ರಹಿಸಬಾರದು ಮತ್ತು ಸಂಗ್ರಹಿಸಿದ ತೊಟ್ಟಿ ಗಳನ್ನು ಭದ್ರವಾಗಿ ಮುಚ್ಚಿಡಬೇಕು.

*ಜನರು ಪ್ರತಿಬಾರಿ ನೀರು ತುಂಬುವಾಗ ಸಂಗ್ರಹಣಾ ತೊಟ್ಟಿಯಲ್ಲಿ ಇರುವ ಹಳೆಯ ನೀರನ್ನು ಸಂಪೂರ್ಣ ಖಾಲಿ ಮಾಡಿ ತೊಟ್ಟಿಗಳನ್ನು ತಿಕ್ಕಿ ತೊಳೆದು ಹೊಸ ನೀರನ್ನು ತುಂಬಬೇಕು.

*ಈಡೀಸ್ ಸೊಳ್ಳೆ ಹಗಲಿನಲ್ಲಿಯೇ ಕಚ್ಚುವುದರಿಂದ ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು, ಬಾಣಂತಿಯರು, ಗರ್ಭಿಣಿಯರು ಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಹಾಗೂ ಹಗಲು ಮತ್ತು ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸುವದು.

*ಮಳೆಗಾಲ ಆರಂಭ ಆಗಿರುವದರಿಂದ ಮನೆಯ ಸುತ್ತ ಎಸೆಯಲಾದ ತೆಂಗಿನ ಚಿಪ್ಪು, ಟಾಯರ್ ಇತರೇ ಘನ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮತ್ತು ಇಂತಹ ಘನ ತ್ಯಾಜ್ಯಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವದು.

*ಯಾವುದೇ ಜ್ವರ ಪ್ರಕರಣ ಕಂಡು ಬಂದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು.


Spread the love

Leave a Reply

Your email address will not be published. Required fields are marked *