ಹಾವಿನೊಂದಿಗೆ ಹೋರಾಡಿ, ಹಾವಿನ ಜೊತೆ ಪ್ರಾಣಬಿಟ್ಟ: “ಸೂರ್ ಮಂಡಲ ಸಿದ್ಧಪ್ಪ”- ಎಣ್ಣೇ ಏಟು, ಹಾವಿನೇಟು.. ಎರಡು ಖಲ್ಲಾಸ್..

ಧಾರವಾಡ: ಗ್ರಾಮದ ಎಲ್ಲೇ ಹಾವೂ ಕಂಡರೂ ಅದನ್ನ ಹಿಡಿದು, ತಾನೂ ಹೆಂಗೆ ಎಂದು ತೋರಿಸಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಹೋರಾಡಿ, ಅದರೊಂದಿಗೆ ತಾನೂ ಪ್ರಾಣ ಬಿಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ಸಮೀಪ ನಡೆದಿದೆ.
ಮುಕ್ಕಲ್ ಗ್ರಾಮದ ಪ್ಲಾಟ್ ನಿವಾಸಿಯಾಗಿರುವ ಸಿದ್ಧಪ್ಪ ಹನಮಂತಪ್ಪ ತಳವಾರ ಎಂಬಾತನೇ ಸಾವಿಗೀಡಾಗಿದ್ದು, ಆತನ ಶವದ ಪಕ್ಕದಲ್ಲೇ ಹಾವೊಂದು ಪ್ರಾಣವನ್ನ ಕಳೆದುಕೊಂಡಿದೆ. ಎರಡು ಮಕ್ಕಳ ತಂದೆಯಾಗಿರುವ ಸಿದ್ಧಪ್ಪ ನಿನ್ನೆ ಇಳಿಸಂಜೆ ಗ್ರಾಮದತ್ತ ಹೋಗಿದ್ದ. ಮರಳಿ ಬಾರದೇ ಬೆಳಿಗ್ಗೆ ಹುಡುಕಲು ಬಂದಾಗ, ಸಮೀಪದರಲ್ಲೇ ಹಾವಿನೊಂದಿಗೆ ಈತನೂ ಮೃತಪಟ್ಟಿರುವುದು ಗೊತ್ತಾಗಿದೆ.
ಸಿದ್ಧಪ್ಪ, ಬಿಲದಲ್ಲಿದ್ದ ಹಾವೂಗಳನ್ನ ಕೈಯಿಂದ ಹಿಡಿದು ಹೊರಗೆ ತೆಗೆಯುತ್ತಿದ್ದ ಯಾರಾದರ ಮನೆಯಲ್ಲಿ ಕಂಡು ಬಂದರೇ, ತಾನೇ ಮುಂದೆ ನಿಂತು ಹಾವನ್ನ ಹಿಡಿದು ಬೇರೆ ಕಡೆ ಬಿಡುತ್ತಿದ್ದ. ಆದರೆ, ವಿಧಿ ಹಾವಿನೊಂದಿಗೆ ಆತನ ಪ್ರಾಣವನ್ನೂ ಹೋಗುವಂತೆ ಮಾಡಿದೆ.
ಮುಕ್ಕಲ್ಲ ಗ್ರಾಮಸ್ಥರು ಈ ಘಟನೆಯನ್ನ ಸೋಜಿಗದಿಂದ ನೋಡುತ್ತಿದ್ದು, ಕಲಘಟಗಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಸಿದ್ಧಪ್ಪನ ಸಾವು ಹೇಗಾಗಿದೆ ಎಂಬುದನ್ನ ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಬೇಕಿದೆಯಷ್ಟೇ.