ಸರಳ ಸಜ್ಜನಿಕೆಯ ಬ್ಯಾಹಟ್ಟಿಯ ಧಣಿ ಶಿದ್ರಾಮಗೌಡ್ರ ಮರಿಗೌಡ್ರ ಇನ್ನಿಲ್ಲ…

ಸರಳ ಸಜ್ಜನಿಕೆ ವ್ಯಕ್ತಿತ್ವ ಧಣಿ ಇನ್ನೂ ನೆನಪು ಮಾತ್ರ
ಹುಬ್ಬಳ್ಳಿ: ಬಡವರ ಕಣ್ಮಣಿಯಂದು ಗುರುತಿಸಿಕೊಂಡಿದ್ದ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಿದ್ರಾಮಗೌಡ ಮರಿಗೌಡ್ರ ಇಂದು ಇಹಲೋಕ ತ್ಯಜಿಸಿದ್ದು, ಗ್ರಾಮದಲ್ಲಿ ದುಃಖ ಮಡವುಗಟ್ಟಿದೆ.
ಶಿದ್ರಾಮಗೌಡ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂತಾಪ… ಶಿದ್ರಾಮಗೌಡ ಮರಿಗೌಡ್ರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಂತಾಪ ಸೂಚಿಸಿದ್ದಾರೆ.
ಗ್ರಾಮಸ್ಥರ ನುಡಿಗಳು
*ಧಾರವಾಡ ಮಾಜಿ ಜಿಲ್ಲಾ ಪರಿಷತ್ ಸದಸ್ಯರು,ಎಸ್ ಪಿ.ಎಂ.ಆರ್.ನ್ಯೂ ಸೆಕೆಂಡರಿ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರು, ಮಾಜಿ.ಹುಬ್ಬಳ್ಳಿ ಎ.ಪಿ.ಎಂ.ಸಿ ಸದಸ್ಯರು ನಮ್ಮೂರಿನ ಮುತ್ಸದ್ದಿ ರಾಜಕಾರಣಿ,ಗ್ರಾಮದ ಬಡವರ ಕಣ್ಮಣಿ ಶ್ರೀ ಶಿದ್ರಾಮಗೌಡ್ರ ವಿ ಮರಿಗೌಡ್ರ ಇಂದು ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.ಭಾವಪೂರ್ಣ ಶ್ರದ್ಧಾಂಜಲಿ..ಆ ದೇವರು ನಿಮ್ಮ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.. ನೀವು ಇಲ್ಲವಾದರೂ ನಿಮ್ಮ ಮೌಲ್ಯಗಳು,ಆದರ್ಶ ತತ್ತ್ವಗಳು ನಿಮ್ಮ ಸಾಮಾಜಿಕವಾಗಿ ನೀವು ನೀಡಿರುವ ಮಾರ್ಗದರ್ಶನ ಸದಾ ಚಿರಸ್ಮರಣೀಯ..ಓಂ ಶಾಂತಿ.. ಮತ್ತೆ ಹುಟ್ಟಿ ಬನ್ನಿ ಧಣಿ..*
*
🙏💐🙏💐😢😢