ನಾಯಿ ಮರಿ ಟ್ಯಾಟೂ ಶವದ ಗುರುತಿಗೆ ಸಾಕ್ಷಿ ನುಡಿಯಿತು..!
 
        ಹುಬ್ಬಳ್ಳಿ: ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೋರ್ವಳ ಶವವನ್ನ ಪತ್ತೆ ಹಚ್ಚಲು ಆಕೆ ಹಾಕಿಕೊಂಡ ನಾಯಿಮರಿ ಟ್ಯಾಟು ಸಾಕ್ಷಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶವ ತರಲು ಹೊರಟಾಗ ಮಾತಾಡಿದ್ದು..
ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ 11 ಜನರು ಮೃತಪಟ್ಟ ನಂತರ ಶವಗಳನ್ನ ಒಬ್ಬೋಬ್ಬರಾಗಿ ತೆಗೆದುಕೊಂಡು ಹುಬ್ಬಳ್ಳಿ ಕಿಮ್ಸ ಶವಾಗಾರದಿಂದ ಹೊರಟಿದ್ದರು. ಆಗ, ಗಡಿಬಿಡಿಯಲ್ಲಿ ನಾಯಿಮರಿ ಟ್ಯಾಟು ಹಾಕಿಸಿಕೊಂಡಿದ್ದ ಅಸ್ಮಿತಾಳ ಶವವನ್ನ ತೆಗೆದುಕೊಂಡು ಪರಂಜ್ಯೋತಿ ಎಂಬುವವರ ಕುಟುಂಬದವರು ತೆಗೆದುಕೊಂಡು ಹೋಗಿದ್ದರು.
ಅಸ್ಮಿತಾಳ ಶವಕ್ಕಾಗಿ ಕಾಯುತ್ತಿದ್ದವರು ಆಕೆ ಕೈ ಮೇಲೆ ಟ್ಯಾಟೂ ಇಲ್ಲದ್ದನ್ನ ನೋಡಿ, ಇದು ನಮ್ಮ ಅಸ್ಮಿತಾ ಅಲ್ಲಾ ಎಂದು ಹೇಳಿದ್ದಾರೆ. ತಕ್ಷಣವೇ ಪರಂಜ್ಯೋತಿ ಶವವನ್ನ ತೆಗೆದುಕೊಂಡು ಹೋಗುತ್ತಿದ್ದವರಿಗೆ ಕಾಲ್ ಮಾಡಿದರೇ, ಆಕೆಯ ಕೈ ಮೇಲೆ ನಾಯಿಮರಿ ಟ್ಯಾಟೂ ಇರುವುದು ಪತ್ತೆಯಾಗಿದೆ.
ತಕ್ಷಣವೇ ನೀವೂ ಎಲ್ಲಿ ಇದ್ದೀರೋ ಅಲ್ಲಿಯೇ ನಿಲ್ಲಿ ಎಂದು ಶವವನ್ನ ತೆಗೆದುಕೊಂಡು ಬರಲು ಸ್ವತಃ ಗ್ರಾಮೀಣ ಠಾಣೆ ಪಿಎಸೈ ಮಹೇಂದ್ರಕುಮಾರ ಹೊರಟಿದ್ದಾರೆ.
ಇಷ್ಟಕ್ಕೋ.. ಯಾರದೋ ಪ್ರೀತಿಗೋ ಹಾಕಿಸಿಕೊಂಡ ಟ್ಯಾಟೂವೊಂದು ಆಕೆಯನ್ನ ಗುರುತಿಸುವಂತಾಗಿದ್ದು ಮಾತ್ರ ವಿಧಿಯಾಟ..
 
                       
                       
                       
                       
                      
 
                         
                 
                 
                