ಧಾರವಾಡ DDPI ಕಚೇರಿಯಲ್ಲಿ “Money ಹೊಡೆದ”ವನ ಕಿತಾಪತಿ…

ಧಾರವಾಡ: ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತದೆ. ಆದರೆ, ಅವುಗಳನ್ನು ಅನಿಷ್ಠಾನಗೊಳಿಸುವಲ್ಲಿ ಕೆಲ ಭ್ರಷ್ಟ ಅಧಿಕಾರಿಗಳಿಂದ ಲೋಪವಾದಾಗ ಸರ್ಕಾರಕ್ಕೆ ಕೆಟ್ಟ ಹೆಸರು ಬರೋದು ಹೊಸದೇನಲ್ಲ. ಈಗ ಇಂತಹದೆ ಒಂದು ಪ್ರಸಂಗವೊಂದ ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಹಂತದ ಅಧಿಕಾರಿಯೊಬ್ಬನಿಂದ ಜಿಲ್ಲೆಯಲ್ಲಿ ಶಿಕ್ಷಣ ಕುಂಟಿತವಾಗುತ್ತಿದೆ ಎಂದು ಶಿಕ್ಷಣ ಪ್ರೇಮಿಗಳು ಆರೋಪಿಸುತ್ತಿದ್ದಾರೆ.
ಕಾರಣ ಆ ಅಧಿಕಾರಿಯ ಮೂಲ ಕರ್ತವ್ಯ ಮತ್ತು ಜವಾಬ್ದಾರಿಗಳು ಏನೇಂದರೆ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದ ಗುರಿ ಹೆಚ್ಚುಸುವುದರ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಜಿಲ್ಲಾ ಉಪನಿರ್ದೇಶಕರೊಂದಿಗೆ ಮಹತ್ವದ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮಾಣಿಕವಾಗಿ ಹಗಲಿರುಳು ದುಡಿಯಬೇಕಾಗುತ್ತದೆ.. ಆದರೆ ಈತ ಆಡು ಮುಟ್ಟದ ಸೊಪ್ಪಿಲ್ಲ ಈತ ಮಾಡದ ಭಷ್ಟಾಚಾರ ಇಲ್ಲ ಎಂಬಂತೆ ತನಗೆ ನಿರ್ವಹಿಸಿದ ಕಾರ್ಯ ಮಾಡದೆ ಜಿಲ್ಲೆಯಲ್ಲಿ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವಲ್ಲಿ ಮಗ್ನನಾಗಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.
ಸದ್ಯ ಉಪನಿರ್ದೇಶಕರ ಕಛೇರಿಯಲ್ಲಿ ಹೊಸದಾಗಿ ಶಾಲೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ತಾಲೂಕಿನ ಎಲ್ಲ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳತ್ತಾರೆ. ಆದರೆ ಈ ಅಧಿಕಾರಿ ತನ್ನ ಕರ್ತವ್ಯಗಳನ್ನು ಬಿಟ್ಟು ತಾಲೂಕಿನ ಎಲ್ಲ ಬಿಇಓ ರವರಿಗೆ ಹೊಸ ಖಾಸಗಿ ಶಾಲೆಗಳ ಪ್ರಸ್ತಾವಣೆಗಳನ್ನು ತನ್ನ ಮುಖಾಂತರವೇ ಸಲ್ಲಿಸಬೇಕು ಎಂದು ಫರ್ಮಾನು ಹೊರಡಿಸಿ ತನಗೆ ಅನುಕೂಲ ಮಾಡಿಕೊಡುವವರಿಗೆ ಮಾತ್ರ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲು ಹೊರಟ್ಟಿದ್ದಾನೆ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯ ಅಧಿಕಾರಿಯೊಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತಕಡೆ ಗಮನ ನೀಡಿ ಇಂತಹ ನೀಚ ಕೃತ್ಯಗಳಿಗೆ ಅವಕಾಶ ನೀಡಬಾರದೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ. ಈಗಾಗಲೆ ಈ ಅಧಿಕಾರಿ ಹುಬ್ಬಳ್ಳಿಯಲ್ಲಿ ಬಿಇಓ ಇದ್ದಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಅನುಭವಿಸಿದ ಅನುಭವಿದ್ದು ಈತನ ಬಗ್ಗೆ ಮೇಲ್ದಾಧಿಕಾರಿಗಳು ಹೆಚ್ಚು ಜಾಗರೂಕರಾಗಿರುವುದು ಅತೀ ಅವಶ್ಯ. ಇಲ್ಲದಿದ್ದಲ್ಲಿ ಅವರನ್ನು ಜೈಲಿಗಟ್ಟುವ ಎಲ್ಲ ಚಾಕಾಚಕ್ಯತೆ ಈತನ್ನಲ್ಲಿದೆ ಎನ್ನಲಾಗುತ್ತಿದೆ.