ಧಾರವಾಡ ಡಿಡಿಪಿಐಯವರಿಗೆ ಮೂರು ತಿಂಗಳಿಂದ ಪೈಲ್ ಕಂಡ್ರೆ ಅಲರ್ಜಿಯಂತೆ… ದೀಪಾವಳಿ ನಂತರ ವರ್ಗಾವಣೆ ಸಾಧ್ಯತೆ…!!!
1 min readಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಕಳೆದ ಮೂರು ತಿಂಗಳಿಂದ ಯಾವುದೇ ಪೈಲ್‌ಗಳನ್ನ ಮುಟ್ಟದೇ, ದಿನಗಳನ್ನ ಮುಂದೆ ಹಾಕುತ್ತಿದ್ದಾರೆಂಬ ದೂರುಗಳು ಕೇಳಿಬಂದಿವೆ.
ಶಿಕ್ಷಕರ ಹಾಗೂ ಸಿಬ್ಬಂದಿಗಳ ವಯಕ್ತಿಕವಾದ ರಾಶಿ ರಾಶಿ ಪೈಲ್‌ಗಳು ಕಚೇರಿಯ ಟೇಬಲ್‌ನ್ನ ತುಂಬಿಸಿದ್ದು, ಅವುಗಳನ್ನ ವಿಲೇವಾರಿ ಮಾಡಲು ಕೆಳದಿಮಠ ಅವರು ತೀರಾ ನಿಷ್ಕಾಳಜಿ ವಹಿಸುತ್ತಿರುವ ಬಗ್ಗೆ ಪೈಲ್ ಸಹಿ ಬೇಕಾದವರು ಗೋಳಿಡುತ್ತಿರುವುದು ಕಂಡು ಬರುತ್ತಿದೆ.
ಈಗ ಎಸ್.ಎಸ್.ಕೆಳದಿಮಠ ಅವರ ವರ್ಗಾವಣೆ ಇದೇ ವಾರ ಆಗಬಹುದೆಂಬ ಸಾಧ್ಯತೆಗಳಿದ್ದು, “ನಾನೇ ವರ್ಗಾವಣೆ ಆಗುತ್ತಿದ್ದೇನೆ. ನಾನೇಕೆ ಸಹಿ ಮಾಡ್ಲಿ” ಎಂಬ ಮನೋಭಾವನೆ ವ್ಯಕ್ತಪಡಿಸುತ್ತಿರುವುದನ್ನ ಮನಿ ಹೊಡೆವ ಅಧಿಕಾರಿ ಬಾಗಿಲ ಬಳಿ ನಿಂತು ಬಂದ ಬಂದ ಶಿಕ್ಷಕ ಹಾಗೂ ಸಿಬ್ಬಂದಿಗಳ ಕಿವಿಯಲ್ಲಿ ಹೇಳುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹಾಗಾದರೇ, ಇಲ್ಲಿ ಮೂರು ತಿಂಗಳಿಂದ ಕೊಳೆಯುತ್ತಿರುವ ಪೈಲ್ ಸ್ಥಿತಿ ಮತ್ತಷ್ಟು ಅಧೋಗತಿಯತ್ತ ಸಾಗುವುದು ನಿಶ್ಚಿತ ಎಂಬುದು ಮನಿ ಹೊಡೆಯುವವರಿಗೆ ಗೊತ್ತಿದೆ.
ಡಿಡಿಪಿಐ ಕೆಳದಿಮಠ ಅವರು ತಮ್ಮ ಕರ್ತವ್ಯದಿಂದ ವಿಮುಖರಾಗಿ ಜೊತೆಯಿದ್ದ ನೌಕರರಿಗೆ ತೊಂದರೆ ಕೊಡುವುದರಿಂದ ಆಗುವ ಲಾಭವಾದರೂ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ.