ಡಿಸಿಪಿ-ಪ್ರಭಾರ ಹುದ್ದೆ ಕ್ಯಾನ್ಸಲ್: ಓಓಡಿ ಮೇಲೆ ಆದೇಶ- ಐಪಿಎಸ್ ಕೆ.ರಾಮರಾಜನ್ ಬಗ್ಗೆ ನಿಮಗೆಷ್ಟು ಗೊತ್ತು..!

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಗೆ ನೂತನ ಡಿಸಿಪಿಯನ್ನಾಗಿ ಐಪಿಎಸ್ ಕೆ.ರಾಮರಾಜನ್ ಅವರನ್ನ ಓಓಡಿ ಮೇಲೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಪ್ರಭಾರದಲ್ಲಿದ್ದ ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ ಅವರ ಡಿಸಿಪಿ ಹುದ್ದೆಯನ್ನ ರದ್ದುಪಡಿಸಿದ್ದಾರೆ.
ರಾಮನಗರ ಜಿಲ್ಲೆಯ ಚೆನ್ನಪಟ್ಟಣ ಉಪವಿಭಾಗದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಐಪಿಎಸ್ ಕೆ.ರಾಮರಾಜನ್ ಅವರನ್ನ ಅನ್ಯ ಕರ್ತವ್ಯದ ಮೇಲೆ ಓಓಡಿ ಆಧಾರದ ಮೇಲೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ತಮಿಳುನಾಡು ಮೂಲದ ಕೆ.ರಾಮರಾಜನ್ ಅವರು 12.01.1991ರಲ್ಲಿ ಜನಿಸಿದ್ದು, 2017ರಲ್ಲಿ ಐಪಿಎಸ್ ಕರ್ನಾಟಕ ಕೇಡರಗೆ ಆಯ್ಕೆಯಾಗಿದ್ದರು. ಇದಾದ ಮೇಲೆ ಕಲಬುರಗಿಯಲ್ಲಿ 24.12.2018ರಿಂದ 24.05.2019ರ ವರೆಗೆ ತರಬೇತಿ ಪಡೆದು, ಚೆನ್ನಪಟ್ಟಣ ಉಪವಿಭಾಗಕ್ಕೆ ಎಸಿಪಿಯಾಗಿ ಕಾರ್ಯನಿರ್ವಹಿಸಿದ್ದರು.
ಇದೀಗ ಹುಬ್ಬಳ್ಳಿ-ಧಾರವಾಡದ ಮಹತ್ವವಾದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. 29 ವಯಸ್ಸಿನ ಯಂಗ್ ಅಧಿಕಾರಿ ಅವಳಿನಗರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.