ಹುಬ್ಬಳ್ಳಿ-ಧಾರವಾಡದಲ್ಲಿ 350 ರೌಡಿ ಷೀಟರಗಳಿಗೆ ವಾರ್ನಿಂಗ್: ಡಿಸಿಪಿ ಬಸರಗಿ
1 min readಹುಬ್ಬಳ್ಳಿ: ಅವಳಿನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಾಗೃತೆ ವಹಿಸಲು ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದ್ದು, ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಷೀಟರಗಳಿಗೆ ಕರೆದು ವಾರ್ನ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಡಿಸಿಪಿ ಬಸರಗಿ ಹೇಳಿದ್ದಾರೆ.
ಅವಳಿನಗರದಲ್ಲಿ ಈಗಾಗಲೇ 350ಕ್ಕೂ ಹೆಚ್ಚು ರೌಡಿ ಷೀಟರಗಳನ್ನ ಠಾಣೆಗೆ ಕರೆದು ವಾರ್ನ ಮಾಡಲಾಗಿದೆ. ತಮ್ಮದೇ ಪ್ರದೇಶದಲ್ಲಿ ಯಾವುದೇ ಘಟನೆ ನಡೆದರೂ, ಅದಕ್ಕೆ ನೀವೇ ಜವಾಬ್ದಾರರು ಎನ್ನುವಂತೆ ಖಡಕ್ ವಾರ್ನ ಕೂಡಾ ಮಾಡಲಾಗಿದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಕೊಲೆ-ಸುಲಿಗೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಇಲಾಖೆ ಮುಂದಾಗಿದ್ದು, ಒಳ್ಳೆಯ ನಡತೆ ಹೊಂದಿದ ರೌಡಿ ಷೀಟರಗಳನ್ನ ಕೈ ಬಿಡುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿರುವ ಸಮಯದಲ್ಲೇ ಡಿಸಿಪಿ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.
ಅಪರಾಧ ವಿಭಾಗದ ಡಿಸಿಪಿ ಬಸರಗಿಯವರ ಪ್ರಕಾರ, ರೌಡಿ ಷೀಟರಗಳಿಗೆ ಬಿಸಿ ಮುಟ್ಟಿಸುವ ಪ್ರಕ್ರಿಯೆ ಇನ್ನೂ ಮುಂದುವರೆಯತ್ತೆ. ಯಾವುದೇ ರಾಜಕಾರಣಿಗಳು ರೌಡಿಗಳನ್ನ ಬೆಳೆಸುವುದಿಲ್ಲ. ತಮ್ಮದೇ ದುಂಡಾವರ್ತನೆಯಿಂದ ಹೀಗೆ ಆಗುತ್ತಾರೆಂದು ಹೇಳಿದರು.