ಸೆಟ್ಲಮೆಂಟ್ ಜಾಧವ ರಾತ್ರೋರಾತ್ರಿ ಪೊಲೀಸ್ ವಶದಲ್ಲಿ: ಡಿಸಿಪಿ ಕೃಷ್ಣಕಾಂತ ರಾತ್ರಿ ಮಾತನಾಡಿದ್ದೇನು..

ಹುಬ್ಬಳ್ಳಿ: ಅಕ್ರಮವಾಗಿ ಮಾರಕಾಸ್ತ್ರಗಳನ್ನ ಹೊಂದಿದ್ದರೆಂಬ ಆರೋಪದಲ್ಲಿ ಸೆಟ್ಲಮೆಂಟ್ ಹಾಗೂ ಇನ್ನುಳಿದ ಪ್ರದೇಶಗಳ ಹಲವರನ್ನ ತಡರಾತ್ರಿಯವರೆಗೂ ಬೆಂಡಿಗೇರಿ ಠಾಣೆಯಲ್ಲಿ ವಿಚಾರಣೆ ಮಾಡಿರುವ ಘಟನೆ ನಡೆದಿದೆ.
ಸೆಟ್ಲಮೆಂಟಿನ ಶ್ಯಾಮ ಜಾಧವ ಸಹೋದರ ರವಿ ಜಾಧವ, ಶ್ರೀನಿವಾಸ ವೀರಾಪುರ ಹಾಗೂ ಬೇಪಾರಿ ಎಂಬುವವರನ್ನ ವಿಚಾರಣೆ ಮಾಡಿದ್ದು, ಕೆಲವರ ಮನೆಯಲ್ಲಿ ತಲ್ವಾರ ಮತ್ತು ಕೊಡಲಿಗಳು ಸಿಕ್ಕಿರುವುದು ಖಚಿತವಾದ ಹಿನ್ನೆಲೆಯಲ್ಲಿ ಠಾಣೆಗೆ ಕರೆಸಲಾಗಿತ್ತು.
ಬೆಂಡಿಗೇರಿ ಠಾಣೆಯಲ್ಲಿ ಸ್ವತಃ ಡಿಸಿಪಿ ಪಿ.ಕೃಷ್ಣಕಾಂತ ಆಗಮಿಸಿ ಆಯುಧ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿ ವಿಚಾರಣೆ ಮಾಡಿದ್ರು. ಈ ಸಮಯದಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಅಕ್ರಮವಾಗಿ ಸಂಗ್ರಹಿಸಿಟ್ಟ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆಯೂ ತಾಕೀತು ಮಾಡಿದ್ದು, ರಾತ್ರೋರಾತ್ರಿ ನಡೆದ ಈ ಕಾರ್ಯಾಚರಣೆ ಸೆಟ್ಲಮೆಂಟ್ ಪ್ರದೇಶದಲ್ಲಿನ ಕೆಲವರಿಗೆ ನಡುಕ ಹುಟ್ಟಿಸಿತ್ತು. ಪೊಲೀಸರ ಕಣ್ಣು ತಪ್ಪಿಸಿ, ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೇ ಪೊಲೀಸರು ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನ ಡಿಸಿಪಿ ಪಿ.ಕೃಷ್ಣಕಾಂತ ನೀಡಿದ್ರು.