ಮಾರ್ವಾಡಿಗಳ ವಿರುದ್ಧ ಹರಿಹಾಯ್ದ ಶಾಸಕ: ಕ್ರಮದ ಎಚ್ಚರಿಕೆ
ದಾವಣಗೆರೆ: ಜಿಂದಾಲ್ ನಿಂದ ಜಿಲ್ಲೆಯ ಹರಿಹರಕ್ಕೆ ಮಹಿಳೆಯೋರ್ವಳು ಕೊರೋನಾ ಹೊತ್ತು ತಂದದಾಗಿದ್ದು, ಇಡೀ ತಾಲೂಕಿನಲ್ಲಿ ಆತಂಕ ಮೂಡಿಸಿದೆ.
ತನ್ನ ಗಂಡನಿಗೆ ಪಾಸಿಟಿವ್ ಬಂದು ಕ್ವಾರಂಟೈನ್ ನಲ್ಲಿದ್ದ ಮಹಿಳೆ ಹರಿಹರದ ತಮ್ಮನ ನಮಗೆ ಬಂದಿದ್ದಳು. ಇದೀಗ ಮಹಿಳೆಗೂ ಪಾಸಿಟಿವ್ ಬಂದಿದ್ದು P9893, 35 ವರ್ಷದ ಮಹಿಳೆಯೇ ಹರಿಹರಕ್ಕೆ ಕಂಟಕವಾಗಿರುವ ಬಗ್ಗೆ ಹರಿಹರದ ಶಾಸಕ ಎಸ್ ರಾಮಪ್ಪ ಮಾಹಿತಿ ನೀಡಿದ್ದಾರೆ.
ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಬೇಕು ಎಂದುಕೊಂಡಿದ್ದೆವು. ಅದರ ಬಗ್ಗೆ ಅಧಿಕಾರಿಗಳ ಹಾಗೂ ವರ್ತಕರ ಜೊತೆ ಸಭೆ ನಡೆಸಿದ್ದೆವು. ಕೆಲವೊಬ್ಬರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಿದ್ದಾರೆ. ಬಹುತೇಕ ಮಂದಿ ಸ್ಪಂಧಿಸುತ್ತಿಲ್ಲ. ನಾಳೆ ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಮಾರ್ವಾಡಿಗಳಿಗೆ ಅಂಗಡಿ ಬಂದ್ ಮಾಡಿ ಎಂದು ಹೇಳಿದ್ರು ಕೇಳುತ್ತಿಲ್ಲ. ಹಗಲು ರಾತ್ರಿ ಅಂಗಡಿ ತೆರೆದುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕೂಡ ವ್ಯಾಪಾರ ಮಾಡಿದ್ರು ಎಂದು ಮಾರ್ವಾಡಿಗಳ ವಿರುದ್ದ ಶಾಸಕ ಎಸ್ ರಾಮಪ್ಪ ಕಿಡಿಕಾರಿದರು.