ಬೆಳೆವಿಮೆ “ಪರಿಹಾರ 50-50” ಮತ್ತೆ ವರ್ಕೌಟ್ ಯತ್ನ… ದುರುಳರ ಬಗ್ಗೆ ಜಾಗೃತೆಯಿರಲಿ… ಬಡ ರೈತ ಬದುಕಲಿ…!!!
ಧಾರವಾಡ: ಮುಂಗಾರು ಮತ್ತು ಹಿಂಗಾರು ಬೆಳೆಯ ಬೆಳೆವಿಮೆ ಪರಿಹಾರ ಪಡೆಯಲು ಮತ್ತೆ ಯತ್ನ ನಡೆಯುತ್ತಿದ್ದು, ಲಜ್ಜೆಗೆಟ್ಟ ಏಜೆಂಟರು, ಅಧಿಕಾರಿಗಳ ಜೊತೆಗೂಡಿ ಹಣ ಹೊಡೆಯಲು ಸಂಜು ರೂಪಿಸಿರುವುದು ಗೊತ್ತಾಗಿದೆ.
ಬೆಳೆವಿಮೆ ಪರಿಹಾರವನ್ನ ಫಿಪ್ಟಿ-ಫಿಪ್ಟಿ ಮಾಡಿಕೊಳ್ಳಲು ಏಜೆಂಟರ್ ಪಡೆ, ಕೆಲ ಶ್ರೀಮಂತ ರೈತರ ಜೊತೆಗೂಡಿ ಮೋಸದ ಜಾಲವನ್ನ ರೂಪಿಸಿದ್ದ ಬಗ್ಗೆ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಮಾಹಿತಿಯನ್ನ ಹೊರಹಾಕಿತ್ತು.
ಗದಗ ಮೂಲದ ಅಕ್ಕಿ ಕಳ್ಳನಿಂದ ಹಿಡಿದು ಹುಬ್ಬಳ್ಳಿ ತಾಲೂಕಿನ ಡಾಕ್ಟರ್ ಎಂದೇ ಕರೆಸಿಕೊಳ್ಳುವ ಗ್ರಾಪಂ ಸದಸ್ಯ, ಈರ‌್ಯಾ ಸೇರಿ ಹಲವು ಅಡ್ಡ ಕಸುಬಿನ ಮುಖವಾಡಗಳ ಬಗ್ಹೆ ಜಾಗೃತಿ ಮೂಡಿಸುವ ಪ್ರಯತ್ನ ಕೆವಿಯಿಂದ ನಡೆದಿತ್ತು.
ಈಗ ಹಳೇಯ ಮುಂಗಾರು ಬೆಳೆವಿಮೆ ಪರಿಹಾರ ಪಡೆದುಕೊಳ್ಳಲು ಶತಪ್ರಯತ್ನ ಆರಂಭಗೊಂಡಿದೆ. ಕಿರೇಸೂರದಲ್ಲಿ ಮೊದಲ ಬಾರಿಗೆ ಗ್ರಾಪಂ ಸದಸ್ಯನಾಗಿರುವ ವಂಚಕನೋರ್ವ ಹಾಲಿಯೊಬ್ಬರ ಕೈಕಾಲು ಹಿಡಿಯುವ ಯತ್ನ ಆರಂಭಿಸಿದ್ದಾನೆ. ತನ್ನ ಅಣ್ಣನ ಫೋನ್‌ಪೇ ಪಡೆದು ರೈತನಿಗೆ ಕೊಟ್ಟಿರುವ ಬಗ್ಗೆಯೂ ಜಾಗೃತನಾಗಿದ್ದಾನೆಂದು ಹೇಳಲಾಗಿದೆ.
ಸರಕಾರ ಈಗಾಗಲೇ ಬೆಳೆವಿಮೆ ಪರಿಹಾರದಲ್ಲಿ ಮೋಸ ನಡೆದಿದೆ ಎಂಬುದು ಅರಿತುಕೊಂಡಿದೆ. ಈಗ ಮುನ್ನಲೆಗೆ ಬಂದಿರುವ ಬಗ್ಗೆಯೂ ಅದು ಚಿಂತನೆ ನಡೆಸಬೇಕಿದೆ.