ಧಾರವಾಡ ಹೆಬ್ಬಳ್ಳಿ ಅಗಸಿಯಲ್ಲಿ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗರುಗಳ ಬಂಧನ
1 min readಧಾರವಾಡ: ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದವರನ್ನ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಧಾರವಾಡದ ಮಂಜುನಾಥ ಕಮಲಾಕರ ಗೋತ್ರಾಳೆ ಹಾಗೂ ಅಲ್ತಾಫ ಸೈಯ್ಯದ ಶೇಖ ಎಂದು ಗುರುತಿಸಲಾಗಿದ್ದು, ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರೆಂದು ಗೊತ್ತಾಗಿದೆ. ಬಂಧಿತರಿಬ್ಬರಿಂದ 41 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸಪೆಕ್ಟರ್ ಅಲ್ತಾಪ ಮುಲ್ಲಾ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳ ಬಗ್ಗೆ ಹಲವು ಬಾರಿ ಮಾಹಿತಿಯಿದ್ದರೂ, ಪದೇ ಪದೇ ಸ್ಥಳವನ್ನ ಬದಲಾವಣೆ ಮಾಡುತ್ತಿದ್ದರು. ಆದರೆ, ಈ ಬಾರಿ ಪೊಲೀಸರು ಚಾಣಾಕ್ಷತನದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷದ ಹಿಂದೆ ಕೊಲೆ ಮಾಡಿದ್ದವನನ್ನ ಬಂಧಿಸಿದ ನವನಗರ ಠಾಣೆ ಪೊಲೀಸರು..!
ಹುಬ್ಬಳ್ಳಿ: ತಾಲೂಕಿನ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಕುಕ್ಕರ್ ನಿರ್ಮಾಣ ಮಾಡುವ ರಾಜಲಕ್ಷ್ಮೀ ಇಂಡಸ್ಟ್ರೀಸ್ ನಲ್ಲಿ ವ್ಯಕ್ತಿಯೋರ್ವನನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ನವನಗರದ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಮೊಹ್ಮದ ನದೀಂ ಮೊಹ್ಮದಹಾರೂನ್ ಎಂಬ ವ್ಯಕ್ತಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ, ಬಿಹಾರ ಮಧುಬನಿ ಜಿಲ್ಲೆಯ ಭವಕುಮಾರ ಬುಲಾಬಜಾ ಎಂಬಾತನನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ಸಪೆಕ್ಟರ್ ಸತೀಶ ಮಾಳಗೊಂಡ ನೇತೃತ್ವದ ತಂಡ ಬಿಹಾರ ರಾಜ್ಯದ ಮಧುಬನಿ ಜಿಲ್ಲೆಯ ಆಕೋರ್ ಗ್ರಾಮದಲ್ಲಿ ಆರೋಪಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಭುವನಕುಮಾರನನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆ ನಡೆದಿದ್ದರ ಬಗ್ಗೆ ಪ್ಯಾಕ್ಟರಿಯ ಮಾಲೀಕ ದೂರು ನೀಡಿದ್ದರು.