Posts Slider

Karnataka Voice

Latest Kannada News

ಗರಗ ಠಾಣೆ ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ “ಬಿಗ್ ಕೇಸ್ ಡಿಟೆಕ್ಟ್”…

1 min read
Spread the love

ಧಾರವಾಡ: ಲಾರಿ ಹಾಗೂ ಗೋವಿನ ಜೋಳ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಮಣಿಕಿಲ್ಲಾದ ಫಾರೂಕ ಅಹ್ಮದ ಅಲಿಯಾಸ್ ಸದ್ದಾಂ, ಮೆಹಬೂಬನಗರ ಹುಸೇನಿ ಮಸೀದಿ ಹತ್ತಿರದ ಫೈರೋಜ ಸೊಲ್ಲಾಪೂರ ಹಾಗೂ ಮನಿಕಿಲ್ಲಾ ಮೀನದ ಮಾರ್ಕೆಟ್ ಲಕ್ಷ್ಮೀ ಗುಡಿ ಬಳಿಯ ನಿವಾಸಿ ಸಿಬಗತುಲ್ಲಾ ಮುಲ್ಲಾ ಎಂಬುವರೇ ಬಂಧಿತ ಆರೋಪಿಗಳು.


ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ಲಾರಿ(ಕೆಎ 25, ಸಿ 1583), 20 ಲಕ್ಷ ರೂ. ಮೌಲ್ಯದ ಲಾರಿ (ಕೆಎ 01, ಎಎಲ್ 8125), 50 ಸಾವಿರ ಕಿಮ್ಮತ್ತಿನ ಮೋಟಾರ್ ಸೈಕಲ್(ಕೆಎ 25, ಎಚ್‌ಎಫ್ 8354) ಹಾಗೂ 2080 ರೂ. ಮೌಲ್ಯದ ಗೋವಿನ ಜೋಳ ತುಂಬಲು ಉಪಯೋಗಿಸಿದ ಖಾಲಿ ಚೀಲಗಳು ಹಾಗೂ ಗೋವಿ ಜೋಳ ಮಾರಾಟ ಮಾಡಿದ್ದ  308400 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ, ಡಿಎಸ್‌ಪಿ ಎಸ್.ಎಂ. ನಾಗರಾಜ ಮಾರ್ಗದರ್ಶನದಲ್ಲಿ ಗರಗ ಠಾಣೆಯ ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ ಡಿ, ಎಚ್.ಎಂ. ನರಗುಂದ, ಬಸವರಾಜ ದೂಪದಾಳ, ಎಸ್.ಎ.ರಾಮನಗೌಡ್ರ, ಮೋಹನ ಪಾಟೀಲ, ವಿ.ಕೆ.ಮುರಗೋಡ, ಮಂಜುನಾಥ ಕೆಲಗೇರಿ, ಐ.ಆರ್.ಅವರಾದಿ, ಉಳವೀಶ ಸಂಪಗಾವಿ, ಈರಪ್ಪ ಲಮಾಣಿ, ಪ್ರವೀಣ ಬಾಗೇವಾಡಿ, ಸಿದ್ದು ಗಾಯಕವಾಡ ಕಾರ್ಯಾಚರಣೆ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.


Spread the love

Leave a Reply

Your email address will not be published. Required fields are marked *