ದೈಹಿಕ ಶಿಕ್ಷಣ ಶಿಕ್ಷಕರ ಕನಸು ನನಸು: ಮುನ್ನುಡಿ ಬರೆದ ಡಿಡಿಪಿಐ ಹಂಚಾಟೆ
1 min readಧಾರವಾಡ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿಗೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಚಾಲನೆ ನೀಡುವ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಕನಸನ್ನ ನನಸು ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಿಪಿಎಡ್ ಮುಗಿದರೂ ಪ್ರಾಥಮಿಕ ಶಾಲೆಯಲ್ಲಿಯೇ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರಿಗೆ ಪದೋನ್ನತಿ ನೀಡುವುದಾಗಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದ್ದರು. ನುಡಿದಂತೆ ನಡೆದುಕೊಂಡ ಡಿಡಿಪಿಐ ಇಂದು ಇಬ್ಬರು ಶಿಕ್ಷಕರಿಗೆ ಪದೋನ್ನತಿ ನೀಡಿದರು.
ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದ ಡಿಪಿಇಪಿಯಲ್ಲಿದ್ದ ಶಿಕ್ಷಕಿ ಸರೋಜಿನಿ ಹೊಸೂರು ಅವರಿಗೆ ಬಡ್ತಿ ನೀಡಿ ಮನಗುಂಡಿ ಪ್ರೌಢಶಾಲೆಯನ್ನ ನೀಡಿದರು. ಅದೇ ರೀತಿ ನವಲಗುಂದ ತಾಲೂಕಿನ ಶಲವಡಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ವಿ.ಆರ್.ಹಾದಿಮನಿಯವರನ್ನ ಶಿಶುವಿನಹಳ್ಳಿ ಪ್ರೌಢಶಾಲೆಗೆ ಪದೋನ್ನತಿ ನೀಡಿದರು.
ದೈಹಿಕ ಶಿಕ್ಷಕರ ಪದೋನ್ನತಿ ನೀಡಿದ ಮೋಹನಕುಮಾರ ಹಂಚಾಟೆ ಅವರಿಗೆ ದೈಹಿಕ ಶಿಕ್ಷಣ ಶಿಕ್ಷಕರ ಪರವಾಗಿ ಆಶಾ ಮುನವಳ್ಳಿ, ಎನ್.ಸಿ.ಪಾಟೀಲ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.