ನಂಬಿದವರ ಕೈ ಬಿಡದ ಕಾಂಗ್ರೆಸ್ ಮುಖಂಡ ಆನಂದ ಕಲಾಲ್: ಎಕ್ಸ್ ಮಿನಿಸ್ಟರ್ ಲಾಡ್ ಸಾಥ್…!
1 min readಧಾರವಾಡ: ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡಾ ರೆಡಿಯಾಗುವ ಸಮಯದಲ್ಲಿ ಕೆಲವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ತೀವ್ರ ಕಸರತ್ತು ಪಟ್ಟು, ಕೊನೆಗೂ “ಕೈ” ಹಿಡಿದಿರುವುದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಹಲವರು ಹಲವು ರೀತಿಯಲ್ಲಿ ಅಡ್ಡಿಪಡಿಸಿದ್ದು, ಆಗ ತಮ್ಮ ಬೆಂಬಲಿಗರ ಹಾಗೂ ಆತ್ಮೀಯರ ಕೈ ಹಿಡಿದಿದ್ದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಆನಂದ ಕಲಾಲ.
ಹೌದು… ತೀವ್ರ ಕುತೂಹಲ ಮೂಡಿಸಿದ್ದ ವಾರ್ಡ್ 23 ರಲ್ಲಿ ಆನಂದ ಕಲಾಲ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಂಜುನಾಥ ಬಡಕುರಿ ಅವರಿಗೆ ಟಿಕೆಟ್ ತಪ್ಪಿಸಲಾಗಿತ್ತು. ಅಷ್ಟೇ ಅಲ್ಲ, ಬೇರೊಬ್ಬರಿಗೆ ಟಿಕೆಟ್ ಲಭಿಸಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಆನಂದ ಕಲಾಲ ಅವರು, ಮಾಜಿ ಸಚಿವ ಸಂತೋಷ ಲಾಡ ಅವರ ಮೂಲಕ ಮಂಜುನಾಥ ಬಡಕುರಿ ಅಭ್ಯರ್ಥಿ ಆಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆನಂದ ಕಲಾಲ ಅವರ ಆತ್ಮೀಯ ಮಂಜುನಾಥ ಬಡಕುರಿ, 23ನೇ ವಾರ್ಡಿನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.
ಇಷ್ಟೇ ಅಲ್ಲದೇ, ಸುಮಾರು ನಾಲ್ಕು ವಾರ್ಡುಗಳಲ್ಲಿ ಆನಂದ ಕಲಾಲ ಅವರ ಜೊತೆಗಿರುವವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರ ಗೆಲುವಿಗಾಗಿ ನಿರಂತರವಾಗಿ ಶ್ರಮ ವಹಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ಛಾಪನ್ನ ಹೊಂದಿರುವ ಆನಂದ ಕಲಾಲ, ಮುದೊಂದು ದಿನ ಪ್ರಮುಖ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಬಗ್ಗೆ ಆನಂದ ಕಲಾಲರು ನೀಡಿ ಪ್ರತಿಕ್ರಿಯೆ…
ಇದರಲ್ಲಿ ನನ್ನ ಪಾತ್ರವೇನು ಇಲ್ಲಾ. ನಮ್ಮ ನಾಯಕರುಗಳಾದ ಸಂತೋಷ ಲಾಡ, ಆರ್.ವಿ.ದೇಶಪಾಂಡೆ, ತನ್ವೀರ ಸೇಠ, ಶ್ರೀನಿವಾಸ ಮಾನೆ, ಇಸ್ಮಾಯಿಲ್ ತಮಾಟಗಾರ ಹಾಗೂ ದೀಪಕ ಚಿಂಚೋರೆಯವರ ಸಹಕಾರದಿಂದ ಟಿಕೆಟ್ ಕೊಡಲಾಗಿದೆ ಎಂದು ಮುಗುಳ್ನಕ್ಕರು