ರಾಜ್ಯದಲ್ಲಿಂದು ಮತ್ತೆ 11042 ಹೊಸ ಕೊರೋನಾ ಕೇಸ್: 15721 ಸೋಂಕಿತರು ಗುಣಮುಖ- 194 ಸೋಂಕಿತರ ಸಾವು…!

Pneumonia coronavirus
ಬೆಂಗಳೂರು: ಕೊರೋನಾ ಪ್ರಕರಣಗಳ ವಿವರವನ್ನ ಬಿಡುಗಡೆ ಮಾಡಲಾಗಿದ್ದು, ಇಂದು ಕೂಡಾ ರಾಜ್ಯದಲ್ಲಿ 11042 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 15721 ಸೋಂಕಿತರು ಗುಣಮುಖ- 194 ಸೋಂಕಿತರ ಸಾವಿಗೀಡಾಗಿದ್ದಾರೆ.

ರಾಜ್ಯದ ಬೆಂಗಳೂರು ನಗರದಲ್ಲಿ 2191 ಪ್ರಕರಣಗಳು ಪತ್ತೆಯಾಗಿದ್ದು, 47 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಬೆಂಗಳೂರಲ್ಲಿ 4846 ಸೋಂಕಿತರು ಗುಣಮುಖರಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 261 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 247 ಸೋಂಕಿತರು ಗುಣಮುಖರಾಗಿದ್ದು, 8 ಸೋಂಕಿತರು ಸಾವಿಗೀಡಾಗಿದ್ದಾರೆ.