ಕೊರೋನಾ ಗೆ ಉಡುಪಿಯಲ್ಲಿ ಮೊದಲ ಬಲಿ: ಬೆಚ್ಚಿಬಿದ್ದ ಕಡಲತಡಿ
1 min readಉಡುಪಿ: ಮುಂಬೈನಿಂದ ಬಂದಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ 54 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ನಂತರ ಅವರ ಗಂಟಲ ದ್ರವ ಪರೀಕ್ಷಗೆ ಒಳಪಡಿಸಿದಾಗ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಉಡುಪಿಯಲ್ಲಿ ಮೊದಲ ಕೊರೋನಾ ಸಾವು ಸಂಭವಿಸಿದೆ.
ಆರಂಭದಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆ ಗೆ ದಾಖಲಾಗಿದ್ದ 54 ವಯಸ್ಸಿನ ವ್ಯಕ್ತಿ, ನೋವು ಉಲ್ಬಣಗೊಂಡು ಮಣಿಪಾಲ ಕೆಎಂಸಿಗೆ ಶಿಫ್ಟ್ ಆಗಿದ್ದರು. ಮೇ 13 ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಮೇ 14 ರ ಬೆಳಿಗ್ಗೆ ನಿಧನರಾಗಿದ್ದರು. ಮಹಾರಾಷ್ಟ್ರದಿಂದ ಬಂದ ಕಾರಣ ಕೊರೋನಾ ಶಂಕೆಯಿತ್ತು ಹಾಗಾಗಿಯೇ ಗಂಟಲಿನ ದ್ರವ ಮಾದರಿ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಎಂದು ಧೃಡವಾಗಿದೆ. ಚಿಕಿತ್ಸೆ ನೀಡಿದ ಕೆಎಂಸಿಯ ಕೆಲ ವೈದ್ಯರು ಸಿಬ್ಬಂದಿಗಳನ್ನ ಕ್ವಾರಂಟೈನ್ ಮಾಡಲಾಗಿದೆ.