Posts Slider

Karnataka Voice

Latest Kannada News

ರಾಜ್ಯದಲ್ಲಿಂದು ದಾಖಲೆ ಕೊರೋನಾ ಪ್ರಕರಣಗಳು ಪತ್ತೆ…!

1 min read
Spread the love

ಬೆಂಗಳೂರು: ಕೋವಿಡ್-19 ಎರಡನೇಯ ಅಲೆಯು ಅತಿಯಾಗಿ ಹೆಚ್ಚಾಗುತ್ತಿದ್ದು, ಒಂದೇ ದಿನ ಬರೋಬ್ಬರಿ 6150 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 39 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪ್ರತಿ ದಿನವೂ ಹೆಚ್ಚಾಗುತ್ತಿದ್ದು, ಇಂದು ಅತಿಯಾದ ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಬೆಂಗಳೂರೊಂದರಲ್ಲೇ 4266 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಧಾರವಾಡ ಜಿಲ್ಲೆಯಲ್ಲಿ 43 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವಿಗೀಡಾಗಿದ್ದಾರೆ. ಕಲಬುರಗಿ, ಬೀದರ, ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳು ನೂರರ ಗಡಿ ದಾಟಿವೆ.

ಕೊರೋನಾ ಎರಡನೇಯ ಅಲೆಯು ಮೊದಲನೇಯ ಅಲೆಗಿಂತ ಹೆಚ್ಚಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ನಿಯಮಗಳ ಉಲ್ಲಂಘನೆ ನಡೆಯುತ್ತಿದ್ದು, ಚುನಾವಣೆಗಳು ಇರೋದ್ರಿಂದ ರಾಜಕಾರಣಿಗಳು ಕೂಡಾ ಈ ಬಗ್ಗೆ ಸರಿಯಾಗಿ ನಡೆದುಕೊಳ್ಳೋದೆ, ಇರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಅಸಡ್ಡೆ ಮೂಡಿಸಿದೆ.


Spread the love

Leave a Reply

Your email address will not be published. Required fields are marked *

You may have missed