ಕೊರೋನಾ ವಾರಿಯರ್ಸ್ ಸೇವೆ ಅನುಪಮ: ಜಗದೀಶ ಶೆಟ್ಟರ
1 min readಹುಬ್ಬಳ್ಳಿ: ಕೊವೀಡ್ -19 ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಸಲ್ಲಿಸಿದ ಸೇವೆ ಅನುಪಮವಾದುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹು-ಧಾ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಕೊರೋನಾ ವಾರಿಯರ್ಸಗಳಿಗೆ ನೀಡಲಾದ ಸಹಾಯ ಹಸ್ತದ ಕಿಟ್ ವಿತರಿಸಿ ಮಾತನಾಡಿದರು.
ಕೊರೋನಾ ವೈರಸ್ ಭೀತಿಯ ನಡುವೆಯು ವಾರಿಯರ್ಸ್ ಅಂಜದೆ ಸೇವೆ ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್, ಆಶಾ ಕಾರ್ಯಕರ್ತೆರು, ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರು, ಜಿಲ್ಲಾಡಳಿತ ಸೋಂಕು ಹರಡವುದನ್ನು ತಡೆಗಟ್ಟುವಲ್ಲಿ ಶ್ರಮಿಸಿವೆ. ಹಲವಾರು ಸಂಘ ಸಂಸ್ಥೆಗಳು ಸಹ ಕೊರೋನಾ ಸಂದರ್ಭದಲ್ಲಿ ನೆರವು ಒದಗಿಸಿವೆ. ಅಪಾಯದ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ 37 ಲಕ್ಷ ಮೌಲ್ಯದ ಮಾಸ್ಕ್, ಸ್ಯಾನಿಟೈಜರ್, ಪೇಸ್ ಶಿಲ್ಡ್, ಗ್ಲೌಸ್, ಪಿ.ಪಿ.ಕಿಟ್ ಸೇರಿದಂತೆ ಇತರೆ ಸಲಕರಣೆಗಳನ್ನು ನೀಡಿರುವ ಸಮರ್ಥನಂ ಸಂಸ್ಥೆ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಟಾನಿ, ಸಮರ್ಥನಂ ಸಂಸ್ಥೆಯ ಮಹಾಂತೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.