ಮನೆಯಲ್ಲಿದ್ದೆ ಕೊರೋನಾ ಗೆದ್ದ 103-101 ವಯಸ್ಸಿನ ಭಲೇ ಜೋಡಿ…!
1 min readಬಳ್ಳಾರಿ: ಕೊರೋನಾ ಭಯದಿಂದಲೇ ದೂರವಾಗುತ್ತಿರುವ ಕೆಲವರ ನಡುವೆ ಶತಾಯುಷಿ ದಂಪತಿಗಳು ಕೊರೋನಾದಿಂದ ಗುಣಮುಖರಾದ ಘಟನೆ ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ದಂಪತಿಗಳು ಹೋಂ ಕ್ವಾರಂಟೈನ್ನಲ್ಲಿದ್ದುಕೊಂಡೇ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದಲ್ಲಿ ನೆಲೆಸಿರುವ ಶತಾಯುಷಿ ದಂಪತಿಗಳಿಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ತುಂಬರಗುದ್ದಿ ಗ್ರಾಮದ ಈರಣ್ಣ (103) ಹಾಗೂ ಈರಮ್ಮ (101) ಕೊರೊನಾ ಸೋಂಕಿನ ವಿರುದ್ಧ ಗೆದ್ದ ದಂಪತಿ. ಕಳೆದ 15 ದಿನಗಳ ಹಿಂದೆಯೇ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ 12 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ಇದೀಗ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇವರನ್ನ ನೋಡಿಯಾದರೂ ಕೊರೋನಾ ಭಯದಿಂದ ದೂರವಾಗಿ ಧೈರ್ಯದಿಂದ ಎದುರಿಸುವ ಅವಶ್ಯಕತೆಯಿದೆ.