ಕೊರೋನಾ ವಾರಿಯರ್ಸಗಳಿಗ ಶಾಸಕರಿಂದ ಪಾದಪೂಜೆ: ವಿನೂತನ ಕಾರ್ಯಕ್ರಮ ಆಯೋಜನೆ

ತುಮಕೂರು: ಗ್ರಾಮೀಣ ಶಾಸಕ ಗೌರಿಶಂಕರ್ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿ ಕೊರೋನಾ ವಾರಿಯರ್ಸಗಳಾದ ನರ್ಸ್ ಹಾಗೂ ಆಶಾ ಕಾರ್ಯಕರ್ತರ ಪಾದ ಪೂಜೆ ಮಾಡಿದರು.
ಸಿದ್ದಗಂಗ ಮಠದ ಶ್ರೀಗಳಾದ ಸಿದ್ದಲಿಂಗಾ ಶ್ರೀಗಳು ಕೂಡ ಎಲ್ಲಾ ವಾರಿಯರ್ಸ್‌ಗಳಿಗು ಹೂ ಮಳೆ ಸುರಿಸಿ ಅಭಿನಂದಿಸಿದರು. ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರಿಗೆ ಬಾಗಿನ ಸೀರೆ ಮತ್ತು ಆಹಾರ ಕಿಟ್ ತರಕಾರಿಯನ್ನ ಶಾಸಕರು ನೀಡಿದರು. ತುಮಕೂರು ತಾಲೂಕಿನ ಕೈದಾಳದ ಗ್ರಾಮದಲ್ಲಿ ವಿಶೇಷ ಸಮಾರಂಭ ಹಮ್ಮಿಕೊಳ್ಲಲಾಗಿತ್ತು. ನೀವು ನಮ್ಮನು ಕಾಪಾಡಿದ್ದೀರಿ. ನಿಮ್ಮ ಕಷ್ಟಗಳು ಏನೆ ಇದ್ದರು ನನಗೆ ಹೇಳಿ ಎಂದು ಶಾಸಕರು ಧೈರ್ಯ ತುಂಬಿದರು.