ಕ್ವಾರಂಟೈನ್ ಮಾಡಿದವರನ್ನ ಕೈಬಿಟ್ಟ ಜಿಲ್ಲಾಡಳಿತ: ಹಸಿವಿನಿಂದ ಪರದಾಟ

ಕಲಬುರಗಿ: ಕ್ವಾರೆಂಟೈನಲ್ಲಿದ್ದವರ ಬಗ್ಗೆ ಜಿಲ್ಲಾಡಳಿತಕ್ಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಕ್ವಾರಂಟೈನ್ ಲ್ಲಿ ಇದ್ದವರಿಗೆ ಸರಿಯಾದ ಉಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿಲ್ಲವೆಂದು ಆರೋಪಿಸಲಾಗಿದೆ.
ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಬೇರೆ ರಾಜ್ಯಗಳಿಂದ ಬಂದ ಜನರಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬೆಳಗ್ಗೆ , ಮಧ್ಯಾಹ್ನ ಸರಿಯಾಗಿ ಊಟ ಸಿಗೋದಿಲ್ಲ, ಕುಡಿಯೋದಕ್ಕೆ ನೀರು ಸರಿಯಾಗಿ ಕೊಟ್ಟಿಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಕೇಳಿದ್ರೆ ಉಡಾಪೆ ಉತ್ತರ ನೀಡುತ್ತಿದ್ದಾರೆ ಎಂದು ಕ್ವಾರಂಟೈನ್ ಗೆ ಗೊಳಗಾದ ವ್ಯಕ್ತಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ತಾಲ್ಲೂಕುಗಳಲ್ಲಿನ ಕ್ವಾರೆಂಟೈನ್ ಸೆಂಟರ್ ನತ್ತ ಗಮನಹರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.