ಸಾಸ್ವಿಹಳ್ಳಿಯ ವ್ಯಕ್ತಿ ಕೊರೋನಾಗೆ ಬಲಿ-ಜಿಲ್ಲೆಯಲ್ಲಿ ವೈರಸ್ ಗೆ ಬಲಿಯಾದವರ ಸಂಖ್ಯೆ 4ಕ್ಕೇರಿಕೆ

ಧಾರವಾಡ: ಕೋವಿಡ್, ಹೆಚ್ ಐವಿ ಏಡ್ಸ್ ಹಾಗೂ ಇತರ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ ಪಿ-8753 ( 42 ವರ್ಷ ,ಪುರುಷ) ಜೂನ್ 24 ರ ರಾತ್ರಿ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.
ಒಣಕೆಮ್ಮು, ಆಹಾರ ನುಂಗಲು ತೊಂದರೆ, ನಿಶ್ಯಕ್ತಿ ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದರು ಹಾಗೂ ಪಿ- 6839 ಅವರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಜೂನ್ 21 ರಂದು ಕೋವಿಡ್ ದೃಢಪಟ್ಟಿತ್ತು. ಶ್ವಾಸಕೋಶದ ಸಮಸ್ಯೆ ಮೊದಲಾದ ಕಾರಣಗಳಿಂದ ಜೂನ್ 24 ರಂದು ರಾತ್ರಿ 11.15 ಕ್ಕೆ ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಜೂನ್ 25 ರಂದು ಜರುಗಿತು.
ಜಿಲ್ಲೆಯಲ್ಲಿ ಇದುವರೆಗೆ ನಾಲ್ವರು ಕೋವಿಡ್ ಪಾಸಿಟಿವ್ ರೋಗಿಗಳು ಮರಣ ಹೊಂದಿದ್ದಾರೆ.