ಆಸ್ಪತ್ರೆಯಿಂದ ಪರಾರಿಯಾಗಿ ಆತ್ಮಹತ್ಯೆಗೆ ಕೊರೋನಾ ರೋಗಿ ಶರಣು: ಯಾಕೇ ಹೀಗಾಯಿತು ಗೊತ್ತಾ…?
ಚಿಕ್ಕಬಳ್ಳಾಪುರ: ಕೊರೋನಾ ಸೋಂಕಿತ ವ್ಯಕ್ತಿಯೋರ್ವ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದಲೇ ಪರಾರಿಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪ್ಪಹಳ್ಳಿಯ ಬಳಿ ನಡೆದಿದೆ.
ನೇಣಿಗೆ ಶರಣಾಗಿರುವ ಅಂಜಿನಪ್ಪ ಎನ್ನುವ ವ್ಯಕ್ತಿ ಚಿಂತಾಮಣಿ ತಾಲೂಕಿನ ಸೀತಾರಾಮಪುರ ಗ್ರಾಮದ ನಿವಾಸಿಯಾಗಿದ್ದ.
ಚಿಕ್ಕಬಳ್ಳಾಪುರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಜಿನಪ್ಪನ ಮನೆಯನ್ನ ಬಟ್ಲಹಳ್ಳಿ ಪೊಲೀಸರು ಸೀಲ್‌ಡೌನ್ ಮಾಡಿದ್ದರು. ಕಳೆದ ಮೂರು ದಿನದ ಹಿಂದೆ ಈತನಿಗೆ ಕೊರೋನಾ ಬಂದಿದೆಯಂದು ಆತ್ಮಹತ್ಯೆಗೆ ಯತ್ನಿಸಿದ್ದ.
ಆಸ್ಪತ್ರೆಯ ಭದ್ರತಾ ಲೋಪವೇ ಅಂಜಿನಪ್ಪ ಪರಾರಿಯಾಗಲು ಕಾರಣವಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.