ಫೆಲ್ಯೂವರ್ ಕಮೀಷನರ್ “ಅಂತ್” ನಾ ಹೇಳಿಲ್ಲ… ಹೆಸರು ಮಣ್ಣು ಪಾಲಾಗತ್ತೆ: ಸಚಿವ ಪ್ರಲ್ಹಾದ ಜೋಶಿ ಏನಂದ್ರು ಗೊತ್ತಾ…!?

ಹುಬ್ಬಳ್ಳಿ: ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರನ್ನ ಫೆಲ್ಯೂವರ್ ಕಮೀಷನರ್ ಎಂದು ನಾನು ಹೇಳಿಲ್ಲ. ಪ್ರಸಾದ ಅಬ್ಬಯ್ಯ ಅವರು ಆನ್ ರೆಕಾರ್ಡ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಕಮೀಷನರ್ ಉತ್ತರ ನೀಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಪ್ರಕರಣವೊಂದರ ಪ್ರಮುಖ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದ ಸಚಿವರು, ನನಗೆ ಗೊತ್ತಿರುವ ಪ್ರಕಾರ ಕಮೀಷನರ್ ಉತ್ತಮ ಅಧಿಕಾರಿ ಎಂದರು.
ಈ ವಿಷಯದಲ್ಲಿ ಪೊಲೀಸ್ ಕಮೀಷನರ್ ಅವರು ಆರೋಪಿಗಳನ್ನ ಬಂಧಿಸದೇ ಹೋದರೇ, ಇಷ್ಟು ವರ್ಷವಿದ್ದ ಉತ್ತಮ ಹೆಸರು ಮಣ್ಣು ಪಾಲಾಗತ್ತೆ ಎಂದು ಹೇಳಿದರು.