ಅಜ್ಜಂಫೀರ್ ಖಾದ್ರಿ ಮನವೊಲಿಕೆ: ಉತ್ತರಕರ್ನಾಟಕದ ಪ್ರಮುಖ ಮುಸ್ಲಿಂ ನಾಯಕನಿಗೆ “ಟಾಸ್ಕ್ ನೀಡಿದ ಹೈಕಮಾಂಡ್’…!!!

ಧಾರವಾಡ: ಶಿಗ್ಗಾಂವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಾದರೇ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಖಾದ್ರಿಯವರು, ಕಾಂಗ್ರೆಸ್ ಜೊತೆಗೆ ಇದ್ದರೇ ಮಾತ್ರ ಸಾಧ್ಯ ಎಂದು ಮನವರಿಕೆ ಮಾಡಿಕೊಂಡಿರುವ ಉತ್ತರಕರ್ನಾಟಕದ ಯುವ ಮುಸ್ಲಿಂ ನಾಯಕನೋರ್ವರಿಗೆ ಹೈಕಮಾಂಡ್ ಟಾಸ್ಕ್ ನೀಡಿದ್ದು, ಬಹುತೇಕ ಅಜ್ಜಂಫೀರ ಖಾದ್ರಿ ನಾಮಪತ್ರ ಮರಳಿ ಪಡೆಯಲು ಪ್ರಯತ್ನ ಆರಂಭಗೊಂಡಿದೆ.
ರಾಜ್ಯದ ಮುಸ್ಲಿಂ ನಾಯಕರಲ್ಲಿ ತಮ್ಮದೇಯಾದ ಛಾಪು ಮೂಡಿಸಿಕೊಂಡಿರುವ ಉತ್ತರಕರ್ನಾಟಕದ ಅಲ್ಪಸಂಖ್ಯಾತರ ನಾಯಕನಿಗೆ ಹೈಕಮಾಂಡ್ ಸೂಚನೆ ಬಂದ ತಕ್ಷಣವೇ, ಪ್ರಮುಖರ ಜೊತೆಗೂಡಿ ಈಗಾಗಲೇ ಅಜ್ಜಂಫೀರ ಅವರನ್ನ ಯುಕೆ ಹೆಬ್ಬಾಗಿಲೆಂದೆ ಗುರುತಿಸಿಕೊಳ್ಳುವ ನಗರಕ್ಕೆ ಕರೆದುಕೊಂಡು ಬಂದಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯ ರಾಜಧಾನಿಯಲ್ಲೂ ತಮ್ಮದೇ ನಾಯಕತ್ವದ ಗುಣ ಹೊಂದಿರುವ ಯುವನಾಯಕ, ಅಜ್ಜಂಫೀರ್ ಅವರನ್ನ ಮನವೊಲಿಕೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ನಗರದಲ್ಲಿರುವ ಅಜ್ಹಂಫೀರ ಖಾದ್ರಿಯವರು ಇಂದು ಸಂಜೆಯೊಳಗೆ ಪ್ರಮುಖ ನಾಯಕರೊಂದಿಗೆ ಸಂಪರ್ಕಕ್ಕೆ ಕರೆದುಕೊಂಡು ಹೋಗುವ ಉದ್ದೇಶವನ್ನ ಯುವ ನಾಯಕ ಹೊಂದಿದ್ದು, ಅದೇ ಕಾರಣಕ್ಕಾಗಿ ಖಾದ್ರಿಯವರ ಮನವೊಲಿಸಲು ಯತ್ನ ಮುಂದುವರೆದಿದೆ.