ನಾಳೆ ನಡೆಯಬೇಕಾಗಿದ್ದ ಬೆಳಗಾವಿಯ ಕಾಂಗ್ರೆಸ್‌ನ ಬೃಹತ್ ಸಮಾವೇಶ ರದ್ದು…!!!
1 min readಬೆಳಗಾವಿ: ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಡಿ.27ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಾಂಗ್ರೆಸ್ ಸಮಾವೇಶವನ್ನ ರದ್ದು ಮಾಡಲಾಗಿದೆ.
1924 ಡಿಸೆಂಬರ್ 26, ಮಧ್ಯಾಹ್ನ 3 ಗಂಟೆ. ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಭಾರತದ ಹೊಸ ದಾರಿಗೆ ನಾಂದಿಯಾಗಿತ್ತು. ಆ ಅಧಿವೇಶನ ಸ್ವಾತಂತ್ರ ಹೋರಾಟಕ್ಕೆ ಸ್ಪಷ್ಟ ದಿಕ್ಕಾಗಿತ್ತು. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಬಳಸಿದ ಚರಕಾಸ್ತ್ರಕ್ಕೆ ಶಕ್ತಿ ತುಂಬಿತ್ತು. ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು. ಸ್ವಾತಂತ್ರ ಹೋರಾಟದ ವಿಸ್ತಾರಕ್ಕೆ ಹಾದಿಯಾಗಿತ್ತು. ಇದೀಗ ಆ ಕಾಂಗ್ರೆಸ್ ಆಧಿವೇಶಕ್ಕೆ 100 ವರ್ಷ ತುಂಬಿದ್ದು, ಇದರ ಸ್ಮರಣಾರ್ಥವಾಗಿ ಬೆಳಗಾವಿಯಲ್ಲಿ ಇಂದಿನಿಂದ 2 ದಿನ ಶತಮಾನೋತ್ಸವ ನಡೆಯುತ್ತಿದ್ದು, ಮೊದಲ ದಿನವಾದ ಇಂದು(ಡಿಸೆಂಬರ್ 26) ಸಿಡಬ್ಲ್ಯುಸಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.
ಇದೀಗ ಬಂದ ಮಾಹಿತಿಯ ಮೇರೆಗೆ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಸಮಾವೇಶವನ್ನ ರದ್ದುಗೊಳಿಸಲಾಗಿದೆ.