ಬಹಿರ್ದೆಸೆಗೆ ಹೋಗಿದ್ದ ವೃದ್ದೆ ಮೇಲೆ ಚಿರತೆ ದಾಳಿ: ರಾಮನಗರದಲ್ಲಿ ನಿಲ್ಲದ ಹಾವಳಿ

ರಾಮನಗರ: ಕಳೆದ ಶನಿವಾರ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಮಗುವನ್ನ ಹೊತ್ತೊಯ್ದು ತಿಂದ ಪ್ರಕರಣ ಹಚ್ಚಹಸಿರಿರುವಾಗಲೇ ಬಹಿರ್ದೆಸೆಗೆ ಹೋಗಿದ್ದ ವೃದ್ಧೆಯನ್ನ ಚಿರತೆಯೊಂದು ಬಲಿ ಪಡೆದಿದ್ದು, ಮತ್ತೆ ಆತಂಕ ಮನೆ ಮಾಡಿದೆ.
ಕೊತ್ತಗಾನಹಳ್ಳಿ ಗ್ರಾಮದ ಗಂಗಮ್ಮ ಚಿರತೆ ದಾಳಿಗೆ ಬಲಿಯಾದ ವೃದ್ದೆಯಾಗಿದ್ದು, ಬೆಂಗಳೂರು ಗ್ರಾಮಾಂತರ ತಾಲೂಕಿನ ಕೊಟ್ಟಗಾನಹಳ್ಳಿಯಲ್ಲಿ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದ ವೃದ್ಧೆಯ ಮೇಲೆ ದಾಳಿ ಮಾಡಿ ಕೊಂದಿರುವ ಚಿರತೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡು, ಪರಿಶೀಲನೆ ನಡೆಸುತ್ತಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.