ಸರಕಾರಿ ಶಾಲೆ ಕಾಮಗಾರಿ: ಹೊಂಡದಲ್ಲಿ ಬಿದ್ದು ಮೂವರು ವಿದ್ಯಾರ್ಥಿಗಳ ಶವ ಪತ್ತೆ – ಇನ್ನೂ ಹೆಚ್ಚಿರುವ ಸಾಧ್ಯತೆ
1 min readಹಾವೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ತೆಗೆದಿದ್ದ ಗುಂಡಿಯಲ್ಲಿ ಹಲವು ವಿದ್ಯಾರ್ಥಿಗಳ ಬಿದ್ದಿದ್ದು, ಈಗಾಗಲೇ ಮೂರು ಶವಗಳನ್ನ ತೆಗೆಯಲಾಗಿದ್ದು, ಇನ್ನೂ ಮೂವರು ಇರಬಹುದೆಂದು ಶಂಕಿಸಲಾದ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಸಂಭವಿಸಿದೆ.
ಪಟ್ಟಣದ ಎರಡನೇಯ ನಂಬರ ಶಾಲೆಯ ಕಾಮಗಾರಿಯನ್ನ ಆರಂಭಿಸಿದ್ದು, ಅಲ್ಲಿಯೇ ದೊಡ್ಡದೊಂದು ಗುಂಡಿಯನ್ನ ತೆಗೆಯಲಾಗಿತ್ತು.
ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಗುಂಡಿಯಲ್ಲಿ ಬಿದ್ದಿದ್ದಾರೆ.
ಹತ್ತು ಅಡಿಗೂ ಹೆಚ್ಚು ಆಳವಾದ ಗುಂಡಿಯಿದ್ದು, ಅದರಲ್ಲಿ ಬಿದ್ದಿರುವ ಮಕ್ಕಳು ಎಷ್ಟು ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಆದರೆ, ಈಗಾಗಲೇ ಮೂವರು ಮಕ್ಕಳ ಶವಗಳು ದೊರಕಿವೆ.
ಆಳೆತ್ತರ ಗುಂಡಿಯು ನಿರಂತರವಾಗಿ ಸುರಿದ ಮಳೆಯಿಂದ ತುಂಬಿ ತುಳುಕುತ್ತಿದ್ದು, ಅದರಲ್ಲಿಯೇ ಮಕ್ಕಳು ಬಿದ್ದಿದ್ದಾರೆ.
ಶಾಲೆಯ ಮೈದಾನದಲ್ಲಿ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.