ಚಾಮುಂಡೇಶ್ವರಿಗೂ ತಟ್ಟಿದ ಕೊರೋನಾ ಎಫೆಕ್ಟ್..! ಆಷಾಢ ಮಾಸದ ವಿಶೇಷ ಅಲಂಕಾರಕ್ಕೆ ಬ್ರೇಕ್..!
1 min readಮೈಸೂರು: ಆಷಾಢ ಮಾಸ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದ್ದು, ಪ್ರತಿವರ್ಷ ಬೆಟ್ಟದಲ್ಲಿ ನಡೆಯುತ್ತಿದ್ದ ವಿಶೇಷ ಅಲಂಕಾರ ರದ್ದುಪಡಿಸಲಾಗಿದೆ.
ಬೆಳಿಗ್ಗೆ 7.30ರ ವರೆಗೂ ಧಾರ್ಮಿಕ ವಿಧಿವಿಧಾನ ಮುಗಿಸಿ ದೇಗುಲಕ್ಕೆ ಬೀಗ ಹಾಕಲಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರ ವಿಶೇಷ ಪೂಜಾ ವ್ಯವಸ್ಥೆಗೂ ಅವಕಾಶ ನಿರಾಕರಿಸಲಾಗಿದೆ.
ಈ ಕಾರಣದಿಂದ ಮೊದಲ ಶುಕ್ರವಾರ ಭಕ್ತರಿಲ್ಲದೆ ಖಾಲಿ ಖಾಲಿಯಾಗಿ ಚಾಮುಂಡಿ ಬೆಟ್ಟ ಬಣಗುಡುತ್ತಿದೆ. ಕೊರೋನಾ ಆತಂಕದಲ್ಲಿ ಚಾಮುಂಡಿ ಬೆಟ್ಟ ಸಂಪೂರ್ಣ ಖಾಲಿ ಖಾಲಿಯಾಗಿ ಕಾಣುತ್ತಿದ್ದು, ಪ್ರತಿ ವರ್ಷ ಆಷಾಢ ಮಾಸದಲ್ಲಿ ಸಾವಿರಾರು ಭಕ್ತರಿಂದ ಬೆಟ್ಟ ತುಂಬಿ ತುಳುಕುತ್ತಿತ್ತು. ಪ್ರಸಾದ ವಿತರಣೆಗೂ ಜಿಲ್ಲಾಡಳಿತ ಬ್ರೇಕ್ ಹಾಕಿದೆ.