ಹೆಂಡತಿ ಕೈ ಹಿಡಿದು ಆರು ತಿಂಗಳ ನಂತರ ಸಿಕ್ಕವನಿಗೆ ಚೂರಿ ಇರಿದ ಗೆಳೆಯ

ಹುಬ್ಬಳ್ಳಿ: ತನ್ನ ಹೆಂಡತಿಯ ಕೈ ಹಿಡಿದು ಎಳೆದ ಪ್ರಕರಣ ನಡೆದು ಆರು ತಿಂಗಳ ನಂತರ ಎದುರಿಗೆ ಸಿಕ್ಕ ಗೆಳೆಯನಿಗೆ ಚಾಕು ಹಾಕಿ, ಪರಾರಿಯಾದ ಘಟನೆ ವಿದ್ಯಾನಗರದ ಲೋಕಪ್ಪನ ಹಕ್ಕಲದ ವಿಘ್ನೇಶ್ವರ ಶಾಲೆ ಮೈದಾನದ ಬಳಿ ನಡೆದಿದೆ.
ಚಾಕುವಿನ ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ವಿಜಯ ಪರಶುರಾಮ ಬಾಗನ್ನವರ ಕಿಮ್ಸಗೆ ರವಾನೆ ಮಾಡಲಾಗಿದ್ದು, ಹೆಗ್ಗೇರಿಯ ಸಲೀಂ ಎಂಬಾತನೇ ಹಲ್ಲೆ ಮಾಡಿ, ತನ್ನದೇ ಕೈ ಬೆರಳನ್ನ ಕಟ್ಟು ಮಾಡಿಕೊಂಡು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ವಿಜಯ ಹಾಗೂ ಸಲೀಂ ಪರಿಚಿತರೇ ಆಗಿದ್ದು, ಕಳೆದ ಆರು ತಿಂಗಳ ಹಿಂದೆ ಇಬ್ಬರು ಜಗಳವಾಡುತ್ತಿದ್ದ ಸಮಯದಲ್ಲಿ ವಿಜಯ, ಸಲೀಂನ ಹೆಂಡತಿಯ ಕೈ ಹಿಡಿದು ಎಳೆದಿದ್ದ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಸಲೀಂ, ಇಂದು ಅದೇ ಸಿಟ್ಟಿನಿಂದ ಚೂರಿ ಹಾಕಿದ್ದಾನೆಂದು ಗೊತ್ತಾಗಿದೆ.
ಮನೆಯಲ್ಲಿ ಮಲಗಿದ್ದ ವಿಜಯ ಹೊರಗಡೆ ಹೋದಾಗ ಘಟನೆ ನಡೆದಿದ್ದು, ಆರೋಪಿಯನ್ನ ಬಿಡಬೇಡಿ ಎಂದು ವಿಜಯನ ತಾಯಿ ಪ್ರಭಾವತಿ ಹೇಳಿದ್ದಾರೆ.