ವಿನಯ ಕುಲಕರ್ಣಿ-ಸಿಬಿಐ ತನಿಖೆ: ಇಂದು ಏನೇನು ನಡೆದಿದೆ ಗೊತ್ತಾ..?
1 min readಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಇಂದು ಕೂಡಾ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಡ್ರೀಲ್ ಮುಂದುವರೆದಿದೆ. ಆ ಸಮಯದಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ರಾಜಕಾರಣಿಗಳೂ ಹಾಗೂ ಯೋಗೇಶಗೌಡ ಗೌಡರನ ಪತ್ನಿಯೂ ಇಂದು ಮತ್ತೆ ಸಿಬಿಐ ಮುಂದೆ ಹಾಜರಾಗಿದ್ದು, ವಿಚಾರಣೆ ನಾಳೆವರೆಗೂ ಮುಂದುವರೆಯಲಿದೆ.
2016 ಜೂನ್ ಹದಿನೈದರಂದು ನಡೆದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ, ನಿರಂತರವಾಗಿ ವಿಚಾರಣೆ ನಡೆಯುತ್ತಿದೆ. ನಾಳೆ ಮತ್ತೆ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ಇದೇ ಕಾರಣಕ್ಕೆ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದೆ. ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಮಂತ್ರಿಯಿದ್ದಾಗಿನ ಆಪ್ತ ಸಹಾಯಕ ಸೋಮಶೇಖರ ನ್ಯಾಮಗೌಡನ ಅಕೌಂಟಿನಿಂದ ಕೋಟಿ ಕೋಟಿ ರೂಪಾಯಿ ಹತ್ಯೆ ಸಮಯದಲ್ಲಿ ಏರುಪೇರಾಗಿರುವ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.
ಯೋಗೇಶಗೌಡ ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಂತಾಗ ಹಿಂದಿನ ದಿನವೇ ಆತನನ್ನ ಬಂದನ ಮಾಡಲಾಗಿತ್ತು. ಆಗ ನೋಡಲ್ ಅಧಿಕಾರಿಯಾಗಿದ್ದ ಎಇಇ ಎಸ್.ಎನ್.ಗೌಡರ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಯೋಗೇಶಗೌಡನ ವಿರುದ್ಧ ದೂರು ದಾಖಲು ಮಾಡಿದ್ದರು. ಹಾಗಾಗಿ, ಅವರು ಇಂದು ಸಿಬಿಐಗೆ ಹಾಜರಾಗಿದ್ದರು. ಯೋಗೇಶಗೌಡನ ಪತ್ನಿ ಮಲ್ಲಮ್ಮ, ಕಾಂಗ್ರೆಸ ಪಕ್ಷಕ್ಕೆ ಸೇರಲು ಹಣ ನೀಡಿದ್ದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಯೋಗೇಶಗೌಡನ ಪತ್ನಿ ಮಲ್ಲಮ್ಮ ಗೌಡರ, ಚಂದೂ ಮಾಮಾ ಕೂಡಾ ಇಂದು ವಿಚಾರಣೆಗೆ ಹಾಜರಾಗಿದ್ದರು. ಈ ನಡುವೆ ವಿನಯ ಕುಲಕರ್ಣಿ ಪತ್ನಿ ಮತ್ತು ಮಕ್ಕಳು ಇಂದು ಕೂಡಾ ಬಂದು ಭೇಟಿಯಾಗಿ ಹೋದರು.
ಈ ಕುರಿತು ನಾಗರಾಜ ಗೌರಿ ಮಾತನಾಡಿದ್ದು, ವಿಚಾರಣೆ ನಡೆಯುತ್ತಿದ್ದು, ಎಲ್ಲ ರೀತಿಯ ಸಹಕಾರವನ್ನು ಕೊಡಲಾಗುತ್ತಿದೆ. ವಿನಯ ಕುಲಕರ್ಣಿಯವರು ಹುಲಿಯಿದ್ದ ಹಾಗೇ, ಹೊರಗಡೆ ಬಂದು ಹುಲಿಯ ಹಾಗೇ ಇರುತ್ತಾರೆ ಎಂದು ಹೇಳಿದರು.
ಈ ನಡುವೆ ಮಾಜಿ ಸಚಿವ ಸಂತೋಷ ಲಾಡ, ಬಾರಾಕೋಟ್ರಿಯಲ್ಲಿರುವ ವಿನಯ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರೊಂದಿಗೆ ಮಾತನಾಡಿದ್ರು. ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ತನಿಖೆ. ಕಾನೂನಿನ ಮೂಲಕ ಎದುರಿಸುತ್ತೇವೆ. ನಾನೂ ವಿನಯ ಕುಟುಂಬದ ಜೊತೆ ಸದಾಕಾಲ ಇರುತ್ತೇನೆ ಎಂದರು.
ವಿನಯ ಕುಲರ್ಣಿಯವರನ್ನ ವಶಕ್ಕೆ ಪಡೆದಿರುವ ಸಿಬಿಐ ನಾಳೆ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈ ಮೂರು ದಿನದ ವಿಚಾರಣೆಯಿಂದ ತೃಪ್ತಿಯಾಗದೇ ಇದ್ದರೇ, ಮತ್ತೆ ಸಿಬಿಐ ಅವರನ್ನ ವಶಕ್ಕೆ ಕೇಳುವ ಸಾಧ್ಯತೆಯಿದೆ.