“ವಿಶ್ವೇಶ್ವರಭಟ್”ರ ಬೊಲೇರೋ ಡಿಕ್ಕಿ: ಐವರುಹುಬ್ಬಳ್ಳಿ ಕಿಮ್ಸ್ ವಿದ್ಯಾರ್ಥಿಗಳ ಸ್ಥಿತಿ ಗಂಭೀರ..!

ಕಾರವಾರ : ಜಿಲ್ಲೆಯ ಶಿರಸಿ ಮೂಲದ ವಿಶ್ವೇಶ್ವರ ಭಟ್ ಎನ್ನುವವರಿಗೆ ಸೇರಿರುವ ಬೋಲೇರೊ ಪಿಕ್ ಆಪ್ ವಾಹನ ಹಾಗೂ ಕಾರ ನಡುವೆ ಅಪಘಾತ ಸಂಭವಿಸಿ ಐವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಅರಬೈಲ್ ನಲ್ಲಿ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಕಾರು ಬೋಲೇರೊ ಪಿಕ್ ಆಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನಲ್ಲಿದ್ದ ಮೂವರು ಯುವತಿಯರು ಹಾಗೂ ಇಬ್ಬರೂ ಯುವಕರು ಗಾಯಗೊಂಡಿದ್ದಾರೆ. ಹುಬ್ಬಳ್ಳಿ ಕಿಮ್ಸನ ವಿದ್ಯಾರ್ಥಿಗಳಾಗಿರುವ ಐವರು ಸೇರಿ ಉತ್ತರಕನ್ನಡ ಹಾಗೂ ಗೋವಾ ಪ್ರವಾಸಕ್ಕೆ ಹೊರಟ್ಟಿದ್ದರು.
ಈ ವೇಳೆ ಗುಳ್ಳಾಪುರ ಕಡೆಯಿಂದ ಅಡಿಕೆ ತುಂಬಿಕೊಂಡು ಸಾಗುತ್ತಿದ್ದ ಬೊಲೇರೊ ಪಿಕ್ ಆಪ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಹಾಗೂ ಓರ್ವ ಯುವತಿ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಗಾಯಗೊಂಡವರೆಲ್ಲರೂ ಹುಬ್ಬಳ್ಳಿಯ ಕಿಮ್ಸ್ ನ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದು, ಈಗಾಗಲೇ ಅವರೆಲ್ಲರನ್ನೂ ಹುಬ್ಬಳ್ಳಿ ಕಿಮ್ಸಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.