ಬ್ಯಾಂಕ್ ಸೆಕ್ಯುರಿಟಿ ಹತ್ಯೆ ಆರೋಪಿಗಳು ಅಂಧರ್- ಮನೆಗಳ್ಳರು ಲಾಕ್: 50 ಬೈಕ್ ವಶ
1 min readವಿಜಯಪುರ: ಗುಮ್ಮಟನಗರಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ಜಿಲ್ಲಾದ್ಯಂತ ವಿವಿಧ ಕಡೆಗೆ ಬೈಕ್ ಗಳ್ಳತನಗೈದಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಮೌನೇಶ್ ಬಡಿಗೇರ, ನಿಂಗಪ್ಪ ಪೂಜಾರಿ, ಮೀರಸಾಬ್ ಬಳಿಗಾರ, ಮೆಹಬೂಬ್ ಬಳಿಗಾರ ಬಂಧಿತ ಬೈಕ್ ಗಳ್ಳರು. ಬಂಧಿತ ಆರೋಪಿಗಳಿಂದ 30 ಲಕ್ಷ ಮೌಲ್ಯದ 50 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಲ್ಲದೇ, ಕಳೆದ ಒಂದು ತಿಂಗಳ ಹಿಂದೆ ಸಿಂದಗಿ ಐಸಿಐಸಿಯ ಬ್ಯಾಂಕ್ ಸೆಕ್ಯುರಿಟಿ ರಾಹುಲ್ ರಾಠೋಡ್ ಹತ್ಯೆಗೈದ ಎಟಿಎಂ ದೋಚಲು ಯತ್ನಿಸಿದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅನಿಲ್ ಬರಗಾಲ್, ಲಕ್ಷ್ಮಣ ಪೂಜಾರಿ, ದಯಾನಂದ ಹೊಸನಿ ಬಂಧಿತ ಕೊಲೆ ಆರೋಪಿಗಳು. ಸಿಂದಗಿಯ ಕೊಂಡಗೂಳಿಯಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ಇನ್ನು ಜಿಲ್ಲಾಧ್ಯಂತ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳು ಕೂಡ ಪೊಲೀಸರು ಅಂಧರ್ ಮಾಡಿದ್ದು, ಸೋಹೈಲ್ ಇನಾಮದಾರ್, ಆಕಾಶ ಕೋಲಕಾರ್ ಬಂಧಿತ ಮನೆಗಳ್ಳರು. ಬಂಧಿತರಿಂದ ಸುಮಾರು 2 ಲಕ್ಷ 15 ಸಾವಿರ ಮೌಲ್ಯದ 40 ಗ್ರಾಂ ಚಿನ್ನ, 190 ಗ್ರಾಂ ಬೆಳ್ಳಿ ಸೇರಿದಂತೆ ಕಬ್ಬಿಣದ ರಾಡ್, ಬ್ಯಾಟರಿ ಜಪ್ತಿ ಮಾಡಿದ್ದಾರೆ.
ಉಳಿದಂತೆ ಅಕ್ರಮವಾಗಿ ಅಡುಗೆ/ಕಮರ್ಶಿಯಲ್ ಗ್ಯಾಸ್ ಸಿಲಿಂಡರ್‌ಗಳನ್ನು Refilling ಮಾಡಿ ಮಾರಾಟ ಮಾಡುವವರ ಮೇಲೆ ಒಟ್ಟು 2 ಪ್ರಕರಣಗಳನ್ನು ದಾಖಲಿಸಿ, ಇಬ್ಬರು ಆರೋಪಿತರನ್ನು ಬಂಧಿಸಿ ಒಂದು ಲಕ್ಷದ 38 ಸಾವಿರ ಮೌಲ್ಯದ ಸಿಲಿಂಡರ್‌ಗಳನ್ನು ಜಪ್ತಿ, COTPA Act-2003 ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳನ್ನು ದಾಖಲಿಸಿ 10 ಜನ ಆರೋಪಿತರನ್ನು ಬಂಧಿಸಿ ಒಂದು ಲಕ್ಷದ 86 ಸಾವಿರ ಮೌಲ್ಯದ ಮಾವಾ, ಕಚ್ಚಾವಸ್ತು (ಅಡಿಕೆ, ತಂಬಾಕು, ಸುಣ್ಣ)ಗಳನ್ನು ಜಪ್ಪಿ ಮಾಡಲಾಗಿದೆ.
ಅಲ್ಲದೇ, ಗೂಂಡಾ ಕಾಯ್ದೆ ಅಡಿಯಲ್ಲಿ 06 ಜನರ ಮೇಲೆ ಕ್ರಮ ಕೈಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನೂ ಹಲವರ ಮೇಲೆ ಗೂಂಡಾ ಕಾಯ್ದೆ ತೆಗೆಯುವ ಸಿದ್ಧತೆ ಇಟ್ಟುಕೊಂಡಿದ್ದು, ಅಬಕಾರಿ ಕಾಯ್ದೆ ಅಡಿಯಲ್ಲಿ 19 ಪ್ರಕರಣಗಳನ್ನು ದಾಖಲಿಸಿ 19 ಆರೋಪಿತರನ್ನು ಬಂಧಿಸಿದ್ದು, 35 ಜೂಜಾಟ ಪ್ರಕರಣಗಳನ್ನು ದಾಖಲಿಸಿ 130 ಆರೋಪಿ ಮತ್ತು 30 (ಓ.ಸಿ) ಮಟಕಾ ಪ್ರಕರಣಗಳನ್ನು ದಾಖಲಿಸಿ 30 ಆರೋಪಿತರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.