ಬೈಕ್ ಸ್ಕೀಡ್: ಗುತ್ತಲ ಅಜ್ಜಪ್ಪ ಗಂಭೀರ ಗಾಯ
1 min readಹುಬ್ಬಳ್ಳಿ: ವೇಗವಾಗಿ ಹೋಗುತ್ತಿದ್ದ ಬೈಕ್ ಆಯತಪ್ಪಿ ಬಿದ್ದು ಯುವಕನೋರ್ವ ಕಾಲು ಮುರಿದುಕೊಂಡು ತೀವ್ರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದ ಬಳಿ ಸಂಭವಿಸಿದೆ.
ಹಾವೇರಿ ಜಿಲ್ಲೆಯ ಗುತ್ತಲ್ ಬಳಿ ಯುವಕ ತನ್ನದೇ ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದ ಪರಿಣಾಮ, ಎಡಗಾಲು ಮುರಿದು ಹೋಗಿದ್ದು ಹೀಗಾಗಿ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಕಾಲು ಮುರಿದಿರುವ ಕಾರಣ ಆಂಬುಲೆನ್ಸ್ ನಿಂದ ಶಿಫ್ಟ್ ಮಾಡುವಾಗ ಕಾಲು ನೋವು ನೋವು ಎಂದು ಕಿರುಚಲು ಪ್ರಾರಂಭಿಸಿದ ಕೂಡಲೇ ಅಕ್ಕ ಪಕ್ಕದ ರೋಗಿಯ ಕಡೆಯವರು ಆಂಬ್ಯುಲೆನ್ಸ್ ಬಳಿ ಬಂದು ಏನಾಗಿದೆ ಅಂತಾ ನೋಡತೊಡಗಿದರು. ಬೈಕ್ ನಿಂದ ಬಿದ್ದು ಕಾಲು ಮುರಿದುಕೊಂಡ ಈತ ಗುತ್ತಲ್ ದ ಅಜ್ಜಪ್ಪ ಎಂದು ತಿಳಿದು ಬಂದಿದೆ.
ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಮಾಹಿತಿ ಪಡೆದಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.