Posts Slider

Karnataka Voice

Latest Kannada News

ಭಾರತಿನಗರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಹೊಯ್ಸಳನಗರದಲ್ಲಿ ಕಮರಿಗೆ ಜಾರಿದ ಬಸ್

1 min read
Spread the love

ತೆಗ್ಗಿಗೆ ಜಾರಿದ ಬಸ್: ಚಾಲಕನಿಗೆ ಗಾಯ

ಧಾರವಾಡ: ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಿಂದ ಬೆಳಗಾವಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ಧಾರವಾಡದ ಹೊಯ್ಸಳನಗರದ ಬಳಿ ತೆಗ್ಗಿಗೆ ಜಾರಿದ ಘಟನೆ ನಡೆದಿದ್ದು, ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ ಚಾಲಕ ಫೈರೋಜಖಾನಗೆ ಗಾಯಗಳಾಗಿದ್ದು, ಇನ್ನುಳಿದ ನಿರ್ವಾಹಕ ಮತ್ತು ಐದು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಗಾಯಾಳು ಚಾಲಕನನ್ನ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಸಾವಧಾನದಿಂದಲೇ ಬಸ್ ಚಲಾಯಿಸುತ್ತಿದ್ದ ಸಮಯದಲ್ಲಿ ಎದುರಿಗೆ ಕಾರನ್ನ ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿದ ಬಸ್, ರಸ್ತೆಯ ತೆಗ್ಗಿಗೆ ಜಾರಿದ್ದು, ಪ್ರಯಾಣಿಕರೆಲ್ಲರೂ ಗಾಬರಿಯಿಂದ ಕಿರುಚಾಟ ನಡೆಸಿದ್ದರು.

ಆದರೆ, ಧೈರ್ಯದಿಂದ ಇರುವಂತೆ ಮನವಿ ಮಾಡಿಕೊಂಡ ಚಾಲಕ ಮಾತ್ರ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿಯನ್ನ ಸಂಗ್ರಹಿಸುತ್ತಿದ್ದಾರೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾಲೇಜ್ ಬಸ್

ಧಾರವಾಡ: ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗಿದ್ದ ಕರ್ನಾಟಕ ಲಾ ಕಾಲೇಜ್ ಮಂಡಳಿಯ ವಿಡಿಐಟಿ ಹಳಿಯಾಳದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಧಾರವಾಡದ ಭಾರತಿನಗರದಲ್ಲಿ ಸಂಭವಿಸಿದೆ.

ಧಾರವಾಡದ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿದ ಬಸ್ ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ವಿದ್ಯುತ್ ಕಂಬ ಸಂಪೂರ್ಣ ಮುರಿದುಬಿದ್ದಿದೆ.

ಘಟನೆಯಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲವಾದರೂ, ಬಸ್ ನ ಮೇಲ್ಭಾಗದಲ್ಲಿಯೇ ವಿದ್ಯುತ್ ತಂತಿ ಪಸರಿಸಿದ್ದರೇ, ದೊಡ್ಡದೊಂಡು ಅವಘಡವೇ ನಡೆದು ಹೋಗುತ್ತಿತ್ತು.

ಘಟನೆಯ ಬಗ್ಗೆ ಮಾಹಿತಿಯನ್ನ ಪಡೆದಿರುವ ಪೊಲೀಸರು, ವಾಹನವನ್ನ ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಭಾರತಿನಗರ ಮತ್ತು ಜಯನಗರದ ಕೆಲವೆಡೆ ವಿದ್ಯುತ್ ಸಮಸ್ಯೆ ತಲೆದೋರಿದೆ.


Spread the love

Leave a Reply

Your email address will not be published. Required fields are marked *