ಸುಳ್ಳ ಗ್ರಾಮದಲ್ಲಿ ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ ನೋಟು: ಎಕ್ಸಕ್ಲೂಸಿವ್ ವೀಡಿಯೋ

ಹುಬ್ಬಳ್ಳಿ: ವಿದ್ಯುತ್ ಅವಘಡದಿಂದ ಬೆಂಕಿಗಾವುತಿಯಾದ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ನೋಟುಗಳು ಸುಟ್ಟು ಕರಕಲಾಗಿದ್ದು, ಮನೆಯವರೆಲ್ಲರೂ ಆತಂಕದಲ್ಲಿ ಮುಳುಗಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ
ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಕಲ್ಲಪ್ಪ ಈಶ್ವರಪ್ಪ ವಾಲಿ ಹಾಗೂ ಶಿವಬಸಪ್ಪ ವಾಲಿ ಅವರ ಮನೆಗೆ ವಿದ್ಯುತ್ ಅವಘಡದಿಂದ ಬೆಂಕಿ ತಾಗಿದೆ. ಅದೇ ಬೆಂಕಿ ಹೆಚ್ಚಾಗಿ, ಮನೆಯಲ್ಲಿದ್ದ ಟ್ರೇಜರಿಗೂ ಬೆಂಕಿ ಹತ್ತಿದೆ.
ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಬ್ಯಾಂಕಿನಿಂದ ತಂದಿಟ್ಟ, 100, 200 ಹಾಗೂ 500 ಮುಖ ಬೆಲೆಯ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾಗಿವೆ. ಜೀವನಕ್ಕೆ ಅವಶ್ಯವಿದ್ದ ಮನೆಯೂ ನೋಟಿನೊಂದಿಗೆ ಸುಟ್ಟು ಹೋಗಿದ್ದು, ಕಾಯಬೇಕಾದ ದೇವರು ಕೂಡಾ, ಸುಟ್ಟು ಕರಕಲಾದ ಕಟ್ಟಿಗೆಯ ಮೇಲೆ ಕೂತಿದೆ.
ಸಹೋದರರ ಬಾಳಿಗೆ ಬೆಳಕಾಗಬೇಕಾದ ನೋಟುಗಳು ಸುಟ್ಟು ಹೋಗಿದ್ದರಿಂದ ಮನೆಯವರೆಲ್ಲರೂ ಚಿಂತೆಯಲ್ಲಿ ಮುಳುಗಿದ್ದು, ಜನರು ಕೂಡಾ ಇವರ ಸ್ಥಿತಿಯಿಂದ ಬೇಸರಗೊಂಡಿದ್ದಾರೆ.