ನಿವೃತ್ತ ಬಿಎಸ್ಎಫ್ ಯೋಧನನ್ನ ಅವಿರೋಧ ಆಯ್ಕೆ ಮಾಡಿ, ಅಧ್ಯಕ್ಷರನ್ನಾಗಿಸಿದ ಗ್ರಾಮಸ್ಥರು…!
1 min readಗದಗ: ದೇಶ ಸೇವೆ ಮಾಡುವ ಸೈನಿಕನಿಗೆ ಗೌರವ ಕೊಡಬೇಕು. ಆತನಿಗೆ ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಬರೀ ಮಾತಿನಲ್ಲೇ ಹೇಳಿದರೇ ಸಾಲದು. ಅದನ್ನ ಕಾರ್ಯಗತ ಮಾಡಿ ತೋರಿಸಬೇಕೆಂಬ ಮಾತನ್ನ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮಸ್ಥರು ಸದ್ದಿಲ್ಲದೇ ಮಾಡಿ ತೋರಿಸಿದ್ದಾರೆ.
ಹೌದು.. ಕಳೆದ ಎರಡು ವರ್ಷದ ಹಿಂದೆ ಬಾರ್ಡರ್ ಸೆಕ್ಯುರಿಟಿ ಪೋರ್ಸ(ಬಿಎಸ್ಎಫ್)ನಲ್ಲಿಕರ್ತವ್ಯ ಸಲ್ಲಿಸಿ ಮರಳಿ ಬಂದ ಯೋಧ ವೆಂಕಟೇಶ ಗೆಜ್ಜಿ ಎಂಬುವವರನ್ನ 4ನೇ ವಾರ್ಡಿನಲ್ಲಿ ನಿಲ್ಲಿಸಿ ಅವಿರೋಧವಾಗಿ ಆಯ್ಕೆ ಮಾಡಿದ್ದರು. ಸಾಲದಕ್ಕೆ ಗ್ರಾಮ ಪಂಚಾಯತಿಗೆ ಜನರಲ್ ಮೀಸಲು ಬಂದಿದ್ದರೂ, ಎಸ್ಸಿ ಕೆಟಗೇರಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಯೋಧ ವೆಂಕಟೇಶ ಅವರನ್ನೇ ಅಧ್ಯಕ್ಷ ಮಾಡಿದ್ದಾರೆ.
ಹಿರೇವಡ್ಡಟ್ಟಿ ಗ್ರಾಮದಲ್ಲಿ ಒಟ್ಟು 19 ಸದಸ್ಯರ ಗೆದ್ದು ಬಂದಿದ್ದು, ವೀರಯೋಧನಿಗೆ ಸಾಥ್ ನೀಡಿದ್ದು ಭಾರತೀಯ ಜನತಾ ಪಕ್ಷದ ಬೆಂಬಲಿತ ಸದಸ್ಯರು, ಹಾಗಾಗಿಯೇ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ವಿರೋಧ ಮಾಡಿದ್ದರೂ ಕೂಡಾ, ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷಗಿರಿ ಪಡೆದುಕೊಂಡಿದ್ದಾರೆ.
ಗ್ರಾಮ ಪಂಚಾಯತಿಗೆ ನಂದಿನಿ ಹೊಳೆಗುಂದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಗ್ರಾಮದ ಅಭಿವೃದ್ಧಿಯನ್ನಷ್ಟೇ ಮನಸ್ಸಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿ ಯೋಧ ವೆಂಕಟೇಶ ಕರ್ನಾಟಕವಾಯ್ಸ್.ಕಾಂಗೆ ತಿಳಿಸಿದರು.