ಹಾವೇರಿ ಜಿಪಂ ಅಧ್ಯಕ್ಷ ಬಿ.ಎಚ್. ದೇಸಾಯಿ ಸಾವು
ಬೆಂಗಳೂರು: ಕೊರೋನಾ ಪಾಸಿಟಿವ್ ನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಾವೇರಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸವನಗೌಡ ದೇಸಾಯಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲೂ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ದೇಸಾಯಿ ಅವರನ್ನ ದುಂಡಸಿ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಿಸಲಾಗಿತ್ತು. ತದನಂತರ ರಾಜಕಾರಣದಲ್ಲೇ ತೊಡಗಿಕೊಂಡಿದ್ದ ದೇಸಾಯಿ, ಜಿಲ್ಲಾ ಪಂಚಾಯತಿ ಅಧ್ಯ್ಷಕರು ಆಗಿದ್ದರು.
ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಸೇರಿದಂತೆ ಹಲವರ ಜೊತೆ ಮೊದಲು ಸಂಪರ್ಕ ಹೊಂದಿದ್ದ ದೇಸಾಯಿ, ಇಲ್ಲವಾಗಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಬೇಸರ ಮೂಡಿಸಿದೆ.
ದೇಸಾಯಿಯವರ ಸಾವಿಗೆ, ಕೆಪಿಸಿಸಿ ಧಾರವಾಡ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.
                      
                      
                      
                      
                      
                        