Karnataka Voice

Latest Kannada News

ಆ ಪುಸ್ತಕ ಮತ್ತೂ ಹಂಗೂ ಹಿಂಗೂ ಆದ ಶಿಕ್ಷಣ ಸಚಿವ ಸುರೇಶಕುಮಾರ..!

Spread the love

ಬೆಂಗಳೂರು: ರಾಜ್ಯದ ಗ್ರಂಥಾಲಯಗಳಿಗೆ ಸಾಹಿತಿ ಕೆ.ಎಸ್.ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ ?’ ಕೃತಿ ಖರೀದಿಸಲು ಮುಂದಾಗಿದ್ದ ಸರಕಾರದ ನಿರ್ಧಾರಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತೀರ್ಮಾನದಿಂದ ಹಿಂದೆ ಸರಿದಿದೆ.

ಒಂದೇಡೆ ಸಚಿವರು, ಆಡಳಿತ ಪಕ್ಷದ ಶಾಸಕರು ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ. ಇನ್ನೋಂದೆಡೆ ಶ್ರೀರಾಮನ ಕುರಿತು ವಿವಾದಾತ್ಮಕ ಅಂಶಗಳಿರುವ ಪುಸ್ತಕವನ್ನ ಸರಕಾರವೇ ಖರೀದಿಸಿ ಪ್ರತಿ ಗ್ರಂಥಾಲಯಕ್ಕೆ ಕಳಿಸಿಕೊಡುವ ಪ್ರಕ್ರಿಯೆ ಕೊನೆ ಹಂತ ತಲುಪಿತ್ತು.

ಈ ಎಲ್ಲ ವಿಚಾರಗಳು ಬಿಜೆಪಿಯಲ್ಲೇ ಅಸಮಾಧಾನಕ್ಕೆ ಕಾರಣವಾಗಿತ್ತು. ಮಾನವರಿಗೆ ಮಂದಿರವೇಕೆ ಬೇಕು..? ಎಂಬುದು ಈ ಕೃತಿಯ ಲೇಖಕರಾದ ಕೆ.ಎಸ್.ಭಗವಾನ್ ಅವರ ವಾದವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ, ಯಾವುದೇ ರೀತಿಯಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗುವಂತಹ ಪುಸ್ತಗಳನ್ನ ಇಲಾಖೆ ಖರೀದಿಸುವುದಿಲ್ಲ. ಅಂತಹ ಯಾವುದೇ ಕ್ರಮವನ್ನ ನಾನು ಪ್ರೋತ್ಸಾಹಿಸುವುದಿಲ್ಲವೆಂದು ಹೇಳಿದ್ದಾರೆ.

ದೇಶಾದ್ಯಂತ ರಾಮ ಮಂದಿರ ಕಟ್ಟುವ ಉತ್ಸಾಹದಲ್ಲಿ ಜನತೆ ದಾನ ಮಾಡಿ ಮಂದಿರ ನಿರ್ಮಾಣಕ್ಕೆ ಕುತೂಹಲದಿಂದ ಕಾಯುತ್ತಿರುವಾಗ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ರಾಮನಿಗೆ ಅವಮಾನವಾಗುವ ತೀರ್ಮಾನ ಮಾಡಿದೆ ರಾಮಮಂದಿರ ಏಕೆ ಕಟ್ಟಬಾರದು ಎಂದು ಸಾಹಿತಿ ಕೆಎಸ್ ಭಗವಾನ್ ಬರೆದಿರುವ ಪುಸ್ತಕವನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಂದರ್ಭಿಕ ವಾದ ವಿಷಯವೊಂದಿದೆ ಎಂದು ಹೇಳಿ ಗ್ರಂಥಾಲಯ ಇಲಾಖೆಗೆ ಪುಸ್ತಕ ಖರೀದಿ ಮಾಡಿ ಸರ್ಕಾರ ಸರ್ಕಾರದ ಮೂಲಕ ಸಾವಿರಾರು ಪುಸ್ತಕಗಳನ್ನು ಜನತೆಗೆ ಹಂಚಿ ಹಿಂದೂ ವಿರೋಧಿ ನೀತಿ ಪಾಲಿಸುತ್ತಿರುವುದು ಹಿಂದೂ ಸಂಘಟನೆಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.


Spread the love

Leave a Reply

Your email address will not be published. Required fields are marked *