“ಆ” ಘಟನೆ ನಡೆದು 120ವರ್ಷ.. ಬಿಜೆಪಿ ಮೋರ್ಚಾ ‘ಆ’ ನೆನಪಿಗಾಗಿ ಮಾಡಿದ್ದೇನು ಗೊತ್ತಾ..!
ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ವಿದ್ಯಾಭ್ಯಾಸದ ಪ್ರಾರಂಭಕ್ಕಾಗಿ ಶಾಲೆಗೆ ಅನುಮತಿ ಪಡೆದು ಇಂದಿಗೆ ಬರೋಬ್ಬರಿ 120 ವರ್ಷಗಳು ಕಳೆದಿವೆ. ಈ ದಿನವನ್ನೂ ಅಭೂತಪೂರ್ವವಾಗಿ ಆಚರಣೆ ಮಾಡುವಲ್ಲಿ ಮಹಾನಗರ ಎಸ್ಸಿ ಮೋರ್ಚಾ ಯಶಸ್ವಿಯಾಗಿದೆ.
ದೇಶಪಾಂಡೆನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಈ ವಿಶೇಷ ದಿನದಂದೇ ‘ಶಾಲೆಯ ಆರಂಭದ ಹೆಜ್ಜೆ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ, ಎಸ್.ಸಿ.ಮೋರ್ಚಾ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಲಿಂಗರಾಜ ಪಾಟೀಲ, ರವಿ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವಿಶೇಷವಾದ ದಿನದಂದೂ ನೂರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನ ನೀಡುವ ಮೂಲಕ ಸಂವಿಧಾನ ಶಿಲ್ಪಿಯ ಅಕ್ಷರ ಕಲಿಕೆಯ ದಿನವನ್ನ ಸ್ಮರಣೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರವಿರುವ ನೋಟ್ ಬುಕ್ ಗಳನ್ನ ಮಕ್ಕಳಿಗೆ ನೀಡುವ ಜೊತೆಗೆ, ಇದೇ ಅಕ್ಷರ ಕಲಿಕೆಗಾಗಿ ಸಂವಿಧಾನ ಶಿಲ್ಪಿ ಪಟ್ಟ ಪಾಡನ್ನ ವಿವರಿಸುವ ಪ್ರಯತ್ನ ಮಾಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ, ಡಾ.ಅಂಬೇಡ್ಕರ ಅವರು ವಿದ್ಯಾಭ್ಯಾಸ ಪಡೆಯಲು ಹಲವು ತೊಂದರೆಗಳನ್ನ ಅನುಭವಿಸಿದರು. ಆದರೂ, ಅವರು ತಮ್ಮ ಹಠವನ್ನ ಬಿಡದೇ ಶಿಕ್ಷಣವನ್ನ ಪಡೆದರು. ಇಂತಹ ಮನೋಭಾವನೆ ಪ್ರತಿಯೊಬ್ಬ ಮಕ್ಕಳಲ್ಲೂ ಇರಬೇಕೆಂದರು.