ಪತಿ ಹತ್ಯೆ ಮಾಡಿದ್ದ ಧಾರವಾಡ-71ರ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿಜೆಪಿಯಿಂದ ಉಚ್ಚಾಟನೆ…

ಧಾರವಾಡ: ತಾಲೂಕಿನ ಮರೇವಾಡ ಗ್ರಾಮದಲ್ಲಿ ಪತಿಯನ್ನ ಹತ್ಯೆ ಮಾಡಿ, ಕಾರಾಗೃಹಕ್ಕೆ ಹೋಗಿರುವ ಧಾರವಾಡ-71 ಕ್ಷೇತ್ರದ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆಯನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಶೋಭಾ ಅಮರಗೋಳ ಎಂಬುವವರೇ ತಮ್ಮ ಪತಿಯಾದ ಈರಣ್ಣ ಅಮರಗೋಳರನ್ನ ಮಕ್ಕಳೊಂದಿಗೆ ಕೂಡಿಕೊಂಡು ಹೊಡೆದು ಕೊಲೆ ಮಾಡಿದ್ದರು.
ಘಟನೆ ನಡೆದ ನಂತರ ಪ್ರಕರಣವನ್ನ ತಿರುಚುವ ಯತ್ನ ನಡೆದಿತ್ತಾದರೂ, ಪೊಲೀಸರು ಚಾಣಾಕ್ಷತನದಿಂದ ತನಿಖೆ ನಡೆಸಿ, ಪ್ರಕರಣದಲ್ಲಿನ ಆರೋಪಿಗಳನ್ನ ಬಂಧನ ಮಾಡಿದ್ದರು.
ಇದಾದ ನಂತರ ಭಾರತೀಯ ಜನತಾ ಪಕ್ಷವೂ ಶೋಭಾ ಅಮರಗೋಳರನ್ನ ಉಚ್ಚಾಟನೆ ಮಾಡಿದೆ ಎಂದು ಜಿಲ್ಲಾ ಅಧ್ಯಕ್ಷೆ ಚೈತ್ರಾ ಶಿರೂರ ಖಚಿತಪಡಿಸಿದ್ದಾರೆ.