213 ಮತಗಳಿಂದ ಸೋತಿದ್ದ ಬಸನಗೌಡ ತುರ್ವಿಹಾಳ: ಕಮಲ ಬಿಟ್ಟು ಕೈಗೆ ಜೈ
1 min readರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಸೋತಿದ್ದ ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ಇಂದು ಕಮಲ ಬಿಟ್ಟು ಕೈ ಹಿಡಿದಿದ್ದು, ಕಾಂಗ್ರೆಸ್ ಗೆ ಕೈಕೊಟ್ಟಿರುವ ಪ್ರತಾಪಗೌಡ ಪಾಟೀಲರಿಗೆ ನಡುಕ ಶುರುವಾಗಲಿದೆ.
ಭಾರತೀಯ ಜನತಾ ಪಕ್ಷಕ್ಕೆ ಹೋಗಿರುವ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಬಿಜೆಪಿ ಸಿಗುವುದು ಖಚಿತವಾಗುತ್ತಿದ್ದಂತೆ ಬಸನಗೌಡ ತುರ್ವಿಹಾಳ ಕಮಲ ಬಿಟ್ಟು ಕೈ ಹಿಡಿದರು. ಈ ಹಿಂದೆ ಪ್ರತಾಪ್ ಗೌಡ ಅಕ್ರಮ ಮತಗಳಿಂದ ಗೆದ್ದಿದ್ದಾರೆಂದು ಕೋರ್ಟ್ ಮೊರೆ ಹೋಗಿದ್ದ ತುರ್ವಿಹಾಳರಿಗೆ ಬಿಜೆಪಿ ವರಿಷ್ಠರು ಕಾಡಾ ಅಧ್ಯಕ್ಷ ಸ್ಥಾನ ನೀಡಿ ಅತೃಪ್ತಿ ಶಮಕ್ಕೆ ಯತ್ನಿಸಿದ್ರು. ಆದರೆ ಅದ್ಯಾವುದನ್ನ ಲೆಕ್ಕಿಸದೇ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮಸ್ಕಿ ಚುನಾವಣೆ ಘೋಷಣೆಯಾಗುವ ಮುನ್ನವೇ ಕಾವೇರುತ್ತಿರುವುದು ಗೊತ್ತಾಗುತ್ತಿದೆ.
ಕಳೆದ ಬಾರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆದ ನಂತರ ಮಸ್ಕಿ ಪ್ರತಾಪಗೌಡ ಫಿಕ್ಸ್ ಎಂಬ ಸಂದೇಶ ರವಾನೆಯಾಗಿತ್ತು. ಅದರ ಪರಿಣಾಮ ಬಿಜೆಪಿಗೆ ಇಂದು ಗೊತ್ತಾಗಿದೆ.