ಬೈಕ್ ಕಳ್ಳತನವನ್ನೇ “ಜೀವನಾಧಾರ” ಮಾಡಿಕೊಂಡಿದ್ದವರ ಬಂಧಿಸಿದ “ಸಂತೋಷ ಪವಾರ್ ಟೀಂ”..
1 min readಹುಬ್ಬಳ್ಳಿ: ಅವಳಿ ನಗರದ ವಿವಿಧ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಅದೇ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ ಇಬ್ಬರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹಲವು ಪ್ರದೇಶಗಳಲ್ಲಿ ಹಲವು ದಿನಗಳಿಂದ ಬೈಕ್ ಗಳ ಕಳ್ಳತನ ನಿರಂತರ ನಡೆಯುತ್ತಲೇ ಇದೆ, ಹೀಗಾಗಿ ಬೈಕ್ ಕಳ್ಳರ ಮೇಲೆ ಕಣ್ಣಿಟ್ಟಿದ್ದ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಸಂತೋಷ ಪವಾರ ನೇತೃತ್ವದ ತಂಡ ಖಚಿತ ಮಾಹಿತಿಯ ಮೆರೆಗೆ ಲೋಕಪ್ಪನ್ ಹಕ್ಕಲದ ಬಳಿ ಇಬ್ಬರು ಬೈಕ್ ಕಳ್ಳರನ್ನು ಬಂಧನ ಮಾಡಿ, ಆರೋಪಿಗಳಿಂದ ಕಳ್ಳತನ ಮಾಡಿದ ಎರಡು ಬೈಕ್ ಗಳನ್ನು ಕೂಡಾ ವಶಕ್ಕೇ ಪಡೆದಿದ್ದಾರೆ.
ಬಂಧಿತ ಆರೋಪಿಗಳಾದ ಹಳೇ ಹುಬ್ಬಳ್ಳಿಯ ಆಸಾರ ಓಣಿಯ ಪ್ರಕಾಶ ಹಾಗೂ ಮಂಟೂರ್ ರಸ್ತೆಯಲ್ಲಿನ ಯುವನಕುಮರ ಎಂಬುವರೆ ಬೈಕ್ ಕಳ್ಳರಾಗಿದ್ದು, ಉಪ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಒಂದು ಬೈಕ್ ಕಳ್ಳತನ ಮಾಡಿದ್ದರು,ಸದ್ಯ ಆರೋಪಿಗಳ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಕ್ ಕಳ್ಳರನ್ನು ಬಂಧನ ಮಾಡಿದ ಇನ್ಸ್ಪೆಕ್ಟರ್ ಸಂತೋಷ ಪವಾರ್, ಪಿ ಎಸ್ ಐ ಗಳಾದ ಶ್ರೀಮಂತ, ಜೆ ಎನ್ ಕಲ್ಯಾಣಿ ಸಿಬ್ಬಂದಿಗಳಾದ ತಿರಕನ್ನವರ, ಸುನೀಲ, ಸೈಯದ್, ರಮೇಶ, ಯಳವತ್ತಿ, ಏಣಗಿ, ಮೂಲಿಮನಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.