ಅಫೀಮ ಮಾರಾಟ- ನಾಲ್ವರ ಬಂಧನ: ಕ್ರಿಕೆಟ್ ಬೆಟ್ಟಿಂಗನಲ್ಲಿ ನಾಲ್ವರ ಬಂಧನ
1 min readಹುಬ್ಬಳ್ಳಿ: ನಗರದ ವಲ್ಲಭಾಯಿನಗರದ ಸಮೀಪ ಅಫೀಮನ್ನ ಮಾರಾಟ ಮಾಡುತ್ತಿದ್ದ ನಾಲ್ವರನ್ನೂ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ನಿದ್ರಾಜನಕ ವಸ್ತುವನ್ನ ವಶಕ್ಕೆ ಪಡೆದಿದ್ದಾರೆ.
ನಾಲ್ವರು ಆರೋಪಿಗಳು ಮೂಲತಃ ರಾಜಸ್ಥಾನದ ಬಾಡಮೇರ ಜಿಲ್ಲೆಯವರಾಗಿದ್ದು ಸಧ್ಯ ಹೊಸಪೇಟೆಯ ಕೌಲಪೇಟೆಯಲ್ಲಿ ವಾಸಿಸುತ್ತಿದ್ದಾರೆ. ದೇವಾರಾಮ ಅಂಬಾರಾಮ ಪಟೇಲ, ಕುಂದನ ಮನ್ಸರಾಮ ಸುತಾರ, ಪ್ರವೀಣಕುಮಾರ ಸೆಂದಾರಾಮ ಲೋಹಾರ ಹಾಗೂ ನರೇಶಕುಮಾರ ಭಾಗೀರಥ ಶರ್ಮಾ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 65000 ಮೌಲ್ಯದ 554 ಗ್ರಾಂ ತೂಕ ಅಫೀಮು ಹಾಗೂ 5 ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನ ಕಾರ್ಯಾಚರಣೆಯನ್ನ ಇನ್ಸಪೆಕ್ಟರ್ ಎಂ.ಎಸ್.ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್ಐ ಬಿ.ಎನ್.ಸಾತನ್ನವರ, ಸಿಬ್ಬಂದಿಗಳಾದ ಸಿ.ಎಸ್.ಚೆಲವಾದಿ, ಎಸ್.ಎ.ಕಲಘಟಗಿ, ಪಿ.ಎಲ್.ಗೋವಿಂದಪ್ಪನವರ, ಕೃಷ್ಣಾ ಕಟ್ಟಿಮನಿ, ಎಸ್.ಬಿ.ಕಟ್ಟಿಮನಿ, ಎಚ್.ಬಿ.ನಂದೇರ ಭಾಗವಹಿಸಿದ್ದರು.
ಹುಬ್ಬಳ್ಳಿಯಲ್ಲಿ ಅಫೀಮು ಬರುತ್ತಿದೆ ಎಂದು ಮಾಹಿತಿಯ ಮೇರೆಗೆ ನಡೆಯುತ್ತಿದ್ದ ತನಿಖೆ ಕೊನೆಗೂ ಆರೋಪಿಗಳನ್ನ ಹೆಡಮುರಿಗೆ ಕಟ್ಟುವ ಮೂಲಕ ನೆರವೇರಿದೆ.
ವಿದ್ಯಾನಗರ ಠಾಣೆಯಲ್ಲಿ ನಾಲ್ವರನ್ನ ಬಂಧನ ಮಾಡಿದ್ದು, ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಬಂಧಿತ ನಾಲ್ವರು ಉಣಕಲ್ ಗ್ರಾಮದ ವಿವಿಧ ಪ್ರದೇಶದವರಾಗಿದ್ದು, ಟಿವಿ, ಮೊಬೈಲ್ ಮತ್ತು ನಗದನ್ನ ವಶಕ್ಕೆ ಪಡೆಯಲಾಗಿದೆ.