Posts Slider

Karnataka Voice

Latest Kannada News

ಉಪಸಭಾಪತಿ ನಡೆಯಿಂದ ಸದನದಲ್ಲಿ ಗದ್ದಲ, ಗೊಂದಲ : ಪರಿಷತ್ ಗಲಾಟೆಗೆ ಟ್ವಿಸ್ಟ್ ಕೊಟ್ಟ ಕಾರ್ಯದರ್ಶಿ ಉತ್ತರ  

1 min read
Spread the love

ಬೆಂಗಳೂರು: ಡಿ15ರ ವಿಧಾನ ಪರಿಷತ್ತಿನ ಕಲಾಪದ ವೇಳೆ ನಡೆದ ಗಲಾಟೆ ಸಂಬಂಧ ಸಭಾಪತಿಯವರು ಕಾರಣ ಕೇಳಿ ನೀಡಿದ್ದ ನೋಟಿಸಿಗೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅಸಮರ್ಪಕ ಹಾಗೂ ಹಾರಿಕೆಯ ಉತ್ತರ ನೀಡಿದ್ದಾರೆ. ಅಲ್ಲದೆ ಇಡೀ ಘಟನೆಗೆ ಉಪಸಭಾಪತಿ ಅವರ ನಡೆಯೇ ಪ್ರಮುಖ ಕಾರಣವೆಂಬಂತೆ ಪತ್ರದಲ್ಲಿ ಉಲ್ಲೇಖಿಸುವ ಮೂಲಕ ತಮ್ಮಿಂದ ಯಾವುದೇ ಪ್ರಮಾದ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ಸಭಾಪತಿ ಅವರು ಕಾರಣ ಕೇಳಿ ನೀಡಿದ್ದ ನೋಟಿಸಿಗೆ ಪ್ರತ್ಯಕ್ಷದರ್ಶಿಯಾಗಿ ನೀಡಬೇಕಾದ ನೈಜ ವರದಿ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಉತ್ತರವನ್ನು ಸಿದ್ದಪಡಿಸಿ ಪತ್ರದ ಮುಖೇನ ಡಿ. 22 ರಂದು ಸಭಾಪತಿ ಅವರಿಗೆ ಸಲ್ಲಿಸಿದ್ದಾರೆ. ನೋಟಿಸಿಗೆ ಉತ್ತರ ನೀಡುವಾಗಲೂ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಅನ್ವಯ ಕಡತದಲ್ಲಿ ಸಲ್ಲಿಸದೆ ಪ್ರತ್ಯೇಕವಾಗಿ ಪತ್ರ ಬರೆಯುವ ಮೂಲಕ ನಿಯಮಾವಳಿಗಳನ್ನು ಕಾರ್ಯದರ್ಶಿ ಮಹಾಲಕ್ಷ್ಮೀ ಉಲ್ಲಂಘಿಸಿದ್ದಾರೆ. ಜೊತೆಗೆ ಸದನದಲ್ಲಿನ ಭದ್ರತೆಗೆ ಸಂಬಂಧಿ ಸಿದಂತೆ ಮಾರ್ಷಲ್ ಗಳಿಂದಾಗಲೀ, ಸದನದಲ್ಲಿ ಕರ್ತವ್ಯ ನಿರತ ಇತರೆ ಯಾವುದೇ ಅಧಿಕಾರಿಗಳಿಂದ ಯಾವುದೇ ಹೇಳಿಕೆ ಅಥವಾ ಉತ್ತರಗಳನ್ನು ಪಡೆದುಕೊಳ್ಳದೆ ತಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮತ್ತಷ್ಟು ಎಡವಟ್ಟುಗಳನ್ನು ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.

ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿಯವರು ಡಿ.16 ರಂದು ಕಾರಣ ಕೇಳಿ ನೀಡಿದ್ದು, ನೋಟಿಸಿಗೆ 48 ಗಂಟೆಗಳ ಬದಲಾಗಿ ಡಿ.22 ರವರೆಗೆ ಸಮಯಾವಕಾಶ ಪಡೆದು ಉತ್ತರವನ್ನು ನೀಡಿದ್ದರೂ ಅದರಲ್ಲಿ ಸ್ಪಷ್ಟ ಹಾಗೂ ನೈಜತೆಯ ಕೊರತೆ ಕಂಡುಬಂದಿದೆ. ಮುಂದೆ ಉದ್ಬವಿಸುವ ಪ್ರಶ್ನೆಗಳಿಗೂ ರಕ್ಷಣಾತ್ಮಕ ಉತ್ತರ ನೀಡುವ  ಪ್ರಯತ್ನ ನಡೆಸಿದ್ದಾರೆ ಎಂಬಂತೆ ಉತ್ತರವು ಭಾಸವಾಗುತ್ತಿದೆ. ಜೊತೆಗೆ ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ. ಸದನವನ್ನು ನಿಯಂತ್ರಿಸುವ, ಸದಸ್ಯರನ್ನು ಪ್ರಶ್ನಿಸುವ ಅಧಿಕಾರ ತಮಗೆ ಇಲ್ಲವೆಂದು ಹೇಳುವ ಮೂಲಕ ತುಂಬಾ ನಾಜೂಕಾಗಿ ಸಭಾಪತಿ, ಉಪ ಸಭಾಪತಿ ಹಾಗೂ ಸದಸ್ಯರ ನಡವಳಿಕೆ, ಕಾರ್ಯವಿಧಾನಗಳನ್ನು ಅವರಿಗೆ ನೆನಪಿಸಿಕೊಡುವ ಪ್ರಯತ್ನ ಮಾಡಿದಂತಿದೆ ಎನ್ನಲಾಗಿದೆ.

ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸದನ ಸಮಾವೇಶಗೊಂಡು ಪರಿಷತ್ ಕಲಾಪ ಅಧಿಕೃತವಾಗಿ ಆರಂಭಗೊಳ್ಳ ದಿದ್ದರೂ ಸದಸ್ಯರ ಮಾತಿನ ಚಕಮಕಿ,ಸಂಭಾಷಣೆಗಳನ್ನು ಪರಿಷತ್ ವರದಿಗಾರರು ದಾಖಲಿಸಿ ದ್ದಾರೆಂಬ ಮಾತುಗಳು ಕೇಳಿ ಬಂದಿವೆ.ಈ ಸಂಬಂಧ ಸಭಾಪತಿ ಅವರು ಕಾರ್ಯದರ್ಶಿಗೆ ನೀಡಿದ ಟಿಪ್ಪಣಿ /ಸೂಚನೆ ಯ ಮೇರೆಗೆ ಡಿ 15ರಂದು ಸದನದಲ್ಲಿ ನಡೆದ ಗದ್ದಲ,ಗಲಾಟೆ ಚೆರ್ಚೆ,ಮಾತಿನ ಚಕಮಕಿ,ಸಂಭಾಷಣೆ ಗಳನ್ನು ಡಿ 16ರಂದು ಕಡತದಿಂದ ತೆಗೆದು ಹಾಕಲಾಗಿದೆ.ಹೀಗಾಗಿ ತಮ್ಮ ಬಳಿ ವೆಬ್ ಕಾಸ್ಟಿಂಗ್ ವಿಡಿಯೋ ಹೊರತು ಪಡಿಸಿ ಮತ್ಯಾವುದೇ ದಾಖಲೆಗಳಿಲ್ಲವೆಂದು ತಿಳಿಸಿದ್ದಾರೆ.ಆ ಮೂಲಕವೂ ಸಭಾಪತಿ ಅವರಿಗೆ ದಾಖಲೆಗಳನ್ನು ನೀಡದೆ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.

ಪರಿಷತ್ ಕಲಾಪ ಪ್ರಾರಂಭಗೊಳ್ಳುವ ಪೂರ್ವದಿಂದಲೂ ಸಭಾಪತಿಯವರ ಅನುಮತಿ ಪಡೆದು ಕೋರಂ ಬೆಲ್ ಹಾಕುವುದರಿಂದ ಮೊದಲ್ಗೊಂಡು,ಸಭಾಪತಿಯವರು ಪೀಠಕ್ಕೆ ಆಗಮಿಸಿ ಕಲಾಪ ಆರಂಭಿಸುವವರೆ ಗೂ ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿ ಆಗಿರುತ್ತದೆ.ಕೋರಂ ಬೆಲ್ ಮುಕ್ತಾಯಗೊಳಿಸುವ ಮೊದಲೇ ಉಪ ಸಭಾಪತಿಗಳು ಪೀಠ ಆಸೀನರಾಗಿದ್ದರೂ ಕಾರ್ಯದರ್ಶಿ ಅವರು ಕಾರ್ಯಕಲಾಪ ಪಟ್ಟಿ ಯನ್ನು ಉಪ ಸಭಾಪತಿಗೆ ಸಲ್ಲಿಸಿರುವುದು ವಿಡಿಯೋ ಸಾಕ್ಷ್ಯಗಳಲ್ಲಿ ದಾಖಲಾಗಿದೆ.ಕೋರಂ ಬೆಲ್ ಮುಕ್ತಾ ಯಕ್ಕೂ ಮುನ್ನವೇ ಕಲಾಪ ಆರಂಭಗೊಂಡು ಕೆಲ ಸದಸ್ಯರು ಮಾತನಾಡುತ್ತಿರುವುದು,ಸಭಾನಾಯ ಕರು,ವಿಪಕ್ಷ ನಾಯಕರು ಚರ್ಚೆ ಮಾಡುತ್ತಿರುವುದು.ಗಲಾಟೆ ನಡೆಯುತ್ತಿದ್ದರೂ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳು ನಿಗದಿತ ಸ್ಥಳ ಬಿಟ್ಟು ಕದಲಿಲ್ಲವೆನ್ನುವುದಕ್ಕೆ ಹಲವಾರು ಪ್ರತ್ಯಕ್ಷ ಹಾಗೂ ವಿಡಿಯೋ ಸಾಕ್ಷ್ಯಗಳು ಸ್ಪಷ್ಟೀಕರಿಸಿವೆ.

ಗದ್ದಲದ ನಡುವೆಯೂ ಸಭಾಪತಿ ಪೀಠದ ಹಿಂದೆ ನಡೆದ ಘಟನೆ,ಕಾಗದ ಪತ್ರಗಳನ್ನು ಸದಸ್ಯರು ಹರಿದು ಹಾಕಿದ್ದನ್ನು,ಉಪಸಭಾಪತಿ ಪೀಠದಿಂದ ಕೆಳಗಿಳಿಸಿದ್ದ,ಕಾಂಗ್ರೆಸ್ ಸದಸ್ಯರು ಪೀಠವನ್ನೇರಿದ್ದು ಸೇರಿದಂತೆ ನಾನಾ ಘಟನಾವಳಿಗಳನ್ನು ತಮ್ಮಅವಗಾಹನೆಗೆ ಬಂದಿರುವಂತೆ ಅಥವಾ ನೋಡಿರುವಂತೆ ಅವರು ವರದಿಯಲ್ಲಿ ತಿಳಿಸಿದ್ದಾರೆ.ವೆಬ್ ಕಾಸ್ಟ್ ದೃಶ್ಯಾವಳಿಯಲ್ಲಿ ಕೆಲವು ಸ್ಪಷ್ಟ ಅಂಶಗಳಿದ್ದರೂ ಕೇವಲ ಕಾಂಗ್ರೆಸ್ ಸದಸ್ಯರ ಹೆಸರನ್ನು ಮಾತ್ರ ಉಲ್ಲೇಖ ಮಾಡಿ ಸರ್ಕಾರದ ಸಚಿವರು,ಆಡಳಿತ ಪಕ್ಷದ ಸದಸ್ಯರ ವರ್ತನೆ ಬಗ್ಗೆ ಯಾವುದೇ ಉಲ್ಲೇಖ ಮಾಡದೆ ಅವರಿಗೆ ರಕ್ಷಣೆ ಕೊಡುವ ಪ್ರಯತ್ನವನ್ನು ಪತ್ರದಲ್ಲಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಸಭಾಪತಿಯವರಿಗೆ ಕಾರ್ಯದರ್ಶಿ ಅವರು ಸಲ್ಲಿಸಿರುವ ಉತ್ತರ ಪ್ರತಿಯಲ್ಲಿ ಉಪ ಸಭಾಪತಿ ಧರ್ಮೇಗೌಡ ರು ಕಲಾಪ ಆರಂಭಗೊಳ್ಳುವ ಮುನ್ನ ತಮ್ಮನ್ನು ಕರೆದು ಪರಿಷತ್ ಕಾರ್ಯವಿಧಾನ ಮತ್ತು ನಡಾವಳಿ ಯಲ್ಲಿ ಸಭಾಪತಿ ಪೀಠದಲ್ಲಿ ಆಸೀನರಾಗಲು ಇರುವ ನಿಯಮಗಳ ಬಗ್ಗೆ ಕೇಳಿದರು.ನಿಯಮಾವಳಿ ಹಾಗು ಸಂವಿಧಾನದ 184ನೇ ಅನುಚ್ಛೇದದ ಪ್ರತಿಯ ಝೆರಾಕ್ಸ್  ಹಾಳೆಗಳನ್ನು ನೀಡುವ ಮೊದಲೇ ಏಕಾಏಕಿ ಸಭಾಪತಿ ಪೀಠಾಸೀನಾರಾಗಿದ್ದರು.ಸಭಾಪತಿ ಅವರು ತಮ್ಮ ಕೊಠಡಿಯಲ್ಲಿದ್ದೂ ಉಪಸಭಾಪತಿಯವರಿಗೆ ಯಾವುದೇ ಅಧಿಕಾರ ಪ್ರದತ್ತ ಮಾಡದೆ ಇರುವ ಮಾಹಿತಿ ಇದ್ದಾಗ್ಯೂ ಪೀಠ ಅಲಂಕರಿಸಿ ಅನಧಿಕೃತವಾಗಿ ಸದನ ನಡೆಸಿಕೊಡಲು ನೆರವಾಗಿರುವ ಕಾರ್ಯದರ್ಶಿಯವರು,ತಮ್ಮ ನಡವಳಿಕೆಯನ್ನು ಸಮರ್ಥಿಸುವ ಬರದಲ್ಲಿ ಜೆರಾಕ್ಸ್ ಪ್ರತಿಗಳನ್ನು ನೀಡಿರುವುದಾಗಿ ತಿಳಿಸುವ ಮೂಲಕ ತಮಗೆ ಈ ಬಗ್ಗೆ ಮುಂಚಿತವಾಗಿ ತಿಳಿದಿತ್ತು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.ಇಲ್ಲದಿದ್ದಲ್ಲಿ  ಅದೇ ನಿಯಮಾವಳಿಯ ಜೆರಾಕ್ಸ್ ಪ್ರತಿಯನ್ನು ಮುಂಚಿತವಾಗಿಯೇ ಪ್ರತಿಯನ್ನು ತೆಗೆದುಕೊಂಡು ಏಕೆ ಇಟ್ಟುಕೊಂಡಿದ್ದರು? ಎಂಬ ಸಂಶಯಕ್ಕೆ ಕಾರಣವಾಗಿದೆ.

ಅದೇ ರೀತಿ ಉಪಸಭಾಪತಿಯವರು ಪರಿಷತ್ ನಡಾವಳಿಯನ್ನು ಕೇಳಿದರೆ ಝೆರಾಕ್ಸ್ ಪ್ರತಿ ಏಕೆ ನೀಡಬೇಕಿ ತ್ತು.ಸಂವಿಧಾನ ಹಾಗೂ ಪರಿಷತ್ ನಡಾವಳಿ ಪುಸ್ತಕಗಳನ್ನು ನೀಡುವ ಬದಲು ಝೆರಾಕ್ಸ್ ಪ್ರತಿ ನೀಡಿದ್ದೇ ನೆಂದು ಹೇಳುವ ಮೂಲಕ ಕಾರ್ಯಕಲಾಪ ಪಟ್ಟಿಯನ್ನು ಸಲ್ಲಿಸಿದ್ದನ್ನು ಮುಚ್ಚಿಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಸಭಾಪತಿ ಅವರ ಕಾರಣ ಕೇಳಿ ನೀಡಿದ್ದ ನೋಟಿಸಿಗೆ ಕಾರ್ಯದರ್ಶಿ ನೀಡಿರುವ ಉತ್ತರಕ್ಕೂ ಸದನದಲ್ಲಿ ನಡೆದ ಘಟನಾವಳಿಗೆ ಹೊಂದಾಣಿಕೆಯಾಗುತ್ತಿಲ್ಲವೆಂಬ ಸಂಶಯ ಸಭಾಪತಿ ಅವರಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.

ಡಿ 15ರಂದು ವಿಧಾನ ಪರಿಷತ್ ಕಲಾಪ ಆರಂಭ ಪೂರ್ವ ಮತ್ತು ಗಲಾಟೆ ಸಂದರ್ಭ ಪರಿಷತ್ ಕಾರ್ಯ ದರ್ಶಿ ಅವರ ನಡವಳಿಕೆ,ಸಭಾಪತಿ ಅವರ ನೋಟಿಸಿಗೆ ನೀಡಿರುವ ಉತ್ತರಕ್ಕೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿದೆ.ಉತ್ತರವು ಅಸ್ಪಷ್ಟ,ಅಸಮಂಜಸವಾಗಿ ಗೋಚರಿಸಿದೆ.ಕಾರ್ಯದರ್ಶಿ ಅವರು  ನಿಯಮಾವಳಿಗಳು,ಪರಿಷತ್ ಕಾರ್ಯ ವಿಧಾನಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ.ಜೊತೆಗೆ ಆ ಬಗ್ಗೆ ಉತ್ತರವನ್ನು ಸರಿಯಾಗಿ ನೀಡದಿರುವುದು ಮತ್ತಷ್ಟು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.ಉತ್ತರದ ಪತ್ರದಲ್ಲಿ ಮೂರು ಕಡೆಗಳಲ್ಲಿ ತಮ್ಮಿಂದ ಲೋಪವಾಗಿಲ್ಲ.ನಿಯಮಾವಳಿ ಮೀರಿಲ್ಲ,ಸಂಚು ರೂಪಿಸಿಲ್ಲ ಎಂದು ಆತಂಕಗೊಂಡು ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದಂತಿದೆ ಎನ್ನಲಾಗಿದೆ.

ಪರಿಷತ್ ಗಲಾಟೆ,ಗದ್ದಲವನ್ನು ಇಡೀ ದೇಶ ಗಮನಿಸಿದ್ದು,ರಾಜ್ಯದ ಪ್ರತಿಷ್ಠೆಗೆ ಧಕ್ಕೆಯಾಗಿದೆ.ಇಂತಹ ಘಟನೆ ಬಗ್ಗೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರನ್ನು ಯುಎನ್ಐ ಸುದ್ದಿ ಸಂಸ್ಥೆ ಪ್ರತಿನಿಧಿ ಸಂಪರ್ಕಿಸಲು ಪ್ರಯತ್ನಿಸಿದರೂ ಮೂರು ದಿನಗಳು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಕಾರ್ಯದರ್ಶಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುವ ಪ್ರಯತ್ನಕ್ಕೂ ಕಾರ್ಯದರ್ಶಿ ಸ್ಪಂದಿಸದೆ ಸಭೆಯಲ್ಲಿರುವುದಾಗಿ, ಕೆಲಸದಲ್ಲಿ ತೊಡಗಿರುವುದಾಗಿ ನೆಪ ಹೇಳಿದ್ದರು. ಕೊನೆಗೆ ಡಿ 25ರಂದು ದೂರವಾಣಿ ಕರೆ ಸ್ವೀಕರಿಸಿ ಸಭಾಪತಿಯವರ ನೋಟಿಸ್ ಹಾಗೂ ತಾವು ನೀಡಿರುವ ಉತ್ತರ ಆಡಳಿತಾತ್ಮಕ ವಿಚಾರ. ಈ ಬಗ್ಗೆ ಏನನ್ನೂ ತಿಳಿಸುವುದಿಲ್ಲವೆಂದಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed