ನವಜಾತ ಶಿಶುಗಳಿಗೆ ಜನ್ಮ ನೀಡಿದ-ಕೊರೋನಾ ಸೋಂಕಿತ ಗರ್ಭೀಣಿಯರು
1 min readಬಳ್ಳಾರಿ: ಕೊರೋನಾ ಸೋಂಕಿತ ಇಬ್ಬರು ಗರ್ಭೀಣಿಯರು ನವಜಾತ ಶಿಶುಗಳಿಗೆ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮಾಹಿತಿ ನೀಡಿದೆ.
29 ವಯಸ್ಸಿನ ಪಿ-6416 ಸೋಂಕಿತ ಮಹಿಳೆ ನವಜಾತ ಶಿಶುವಿಗೆ ಜನ್ಮ ನೀಡಿದ್ದು, ನುರಿತ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ.
ರಾಯದುರ್ಗ ಇನ್ನೋರ್ವ ಸೋಂಕಿತ 28 ವರ್ಷದ ಮಹಿಳೆ ಪಿ-7094 ನವಜಾತ ಶಿಶುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗುವಿನಲ್ಲಿ ಯವುದೇ ರೀತಿ ಆರೋಗ್ಯ ಸಮಸ್ಯೆ ಇಲ್ಲ. ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಗೆ ನುರಿತ ವೈದ್ಯರ ತಂಡದಿಂದ ನಿರ್ಣಯ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಉಳಿದ ಎಂಟು ಜನ ಗರ್ಭೀಣಿ ಸೋಂಕಿತರಿದ್ದು, ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹೇಳಿದ್ದಾರೆ.