ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ “ಜನರ ನೆಮ್ಮದಿಗಾಗಿ” ವಿಶೇಷ ಪೂಜೆ…!!!

ಬೆಳಗಾವಿ: ಸದಾ ಸಾರ್ವಜನಿಕರ ನೆಮ್ಮದಿಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು, ಕೆಲ ಜನರಲ್ಲಿಯೇ ಅತಿಯಾದ ಅಪರಾಧ ಮನೋಭಾವನೆ ಬೆಳೆಯುತ್ತಿದ್ದರೇ, ಅದು ಕಡಿಮೆ ಆಗಲಿ ಎಂಬ ಸದುದ್ದೇಶದಿಂದ ವಿಶೇಷವಾದ ಪೂಜೆ- ಪುನಸ್ಕಾರ ನಡೆಸಲಾಗಿರುವ ಭಾವಚಿತ್ರಗಳು ವೈರಲ್ ಆಗಿದೆ.
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸದಾಕಾಲ ಜನರಿಗಾಗಿ ಅತ್ಯುತ್ತಮವಾದ ಕರ್ತವ್ಯ ನಿರ್ವಹಿಸುತ್ತ ಬರಲಾಗುತ್ತಿದೆ. ಹಾಗೇನೆ, ಗಣೇಶ ಚತುರ್ಥಿಯನ್ನ ಸಡಗರದಿಂದ ಆಚರಣೆ ಮಾಡಿ, ಜನರ ಮನಸ್ಸು ಗೆದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ಕೆಲ ದಿನಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದರಿಂದ, ಜನರ ಆತಂಕ ದೂರಾಗಿ, ಅವರಲ್ಲಿ ನೆಮ್ಮದಿ ಮೂಡಲಿ ಎಂಬ ಉದ್ದೇಶದಿಂದ ಪೂಜೆಗಳನ್ನ ಹಮ್ಮಿಕೊಂಡಿರುವುದು ತೀರಾ ವಿಶೇಷವಾಗಿದೆ.
ಸಾರ್ವಜನಿಕರ ಒಳತಿಗಾಗಿ ಪೊಲೀಸರು ಠಾಣೆಯಲ್ಲಿ ಹಮ್ಮಿಕೊಂಡಿದ್ದ ಈ ಪೂಜೆ-ಪುನಸ್ಕಾರದಲ್ಲಿ ಸ್ಥಳೀಯ ಜನರು ಭಾಗವಹಿಸಿದ್ದು ವಿಶೇಷವಾಗಿದೆ. ಇಂತಹ ಪೊಲೀಸರು ವ್ಯವಸ್ಥೆಯಲ್ಲಿ ಇರುವುದರಿಂದಲೇ, ಜನತೆ ಮತ್ತಷ್ಡು ನೆಮ್ಮದಿಯ ಬದುಕು ಕಂಡುಕೊಳ್ಳಬಹುದಾಗಿದೆ. ಗ್ರೇಟ್ ಪೊಲೀಸ್…