Posts Slider

Karnataka Voice

Latest Kannada News

ಜನೇವರಿ 28ಕ್ಕೇ ಹೋಂ ಮಿನಿಸ್ಟರ್ ಬರ್ತಡೇ ಮಾಡಿಕೊಳ್ತಿಲ್ವಂತೆ..

1 min read
Spread the love

ಹುಬ್ಬಳ್ಳಿ: ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದೇ ತಿಂಗಳ 28ರಂದು ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಕ್ಷೇತ್ರಗಳ ಪ್ರವಾಸದಲ್ಲಿರುತ್ತಾರಂತೆ.

ಈ ಕುರಿತು ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿರುವ ಬಸವರಾಜ ಬೊಮ್ಮಾಯಿಯವರು, ನನ್ನ ಜನ್ಮದಿನದಂದು ಯಾರೂ ಪ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಹಾಕಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಶುಭಾಶಯ ಕೋರಲು ಉಡುಗೊರೆ, ಶಾಲು, ಮಾಲೆ, ಹೂಗುಚ್ಚಗಳನ್ನ ತರಬೇಡಿ. ನಾನೂ ಆ ದಿನದಂದು ಇಲಾಖೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ ಎಂದಿದ್ದಾರೆ.

ನೀವೂ ನನಗೆ ಕೊಡಮಾಡುವ ಉಡುಗೊರೆಗಳ ಬದಲಾಗಿ, ಬಡವರಿಗೆ ಹಾಗೂ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಎಂದು ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *